Advertisement

ಅಮೆರಿಕ-ಚೀನ ವಾಣಿಜ್ಯ ಬಿಕ್ಕಟ್ಟಿನಿಂದ ನಮಗೆ ಉತ್ತಮ ಅವಕಾಶ: ಪಾಕಿಸ್ಥಾನ

03:32 PM Oct 04, 2018 | udayavani editorial |

ಇಸ್ಲಾಮಾಬಾದ್‌ : ಅಮೆರಿಕ ಮತ್ತು ಚೀನ ನಡುವಿನ ತೀವ್ರಗೊಳ್ಳುತ್ತಿರುವ ವಾಣಿಜ್ಯ ಸುಂಕ ಸಮರದಿಂದ ತನಗೆ ಉತ್ತಮ ಅವಕಾಶ ಪ್ರಾಪ್ತವಾಗಲಿದೆ, ಅಂತೆಯೇ ಪರೋಕ್ಷ ಲಾಭವಾಗಲಿದೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ.

Advertisement

“ಅಮೆರಿಕ ಮತ್ತು ಚೀನ ನಡುವೆ ಹೆಚ್ಚುತ್ತಿರುವ ವಾಣಿಜ್ಯ ಸುಂಕ ಸಮರವು ಪಾಕಿಸ್ಥಾನಕ್ಕೆ ಶುಭ ಸೂಚಕವಾಗಿದೆ; ಇದರಿಂದಾಗಿ ನಾವು ಇನ್ನೂ ಉತ್ತಮ ಚೌಕಾಶಿ ನಡೆಸುವ ಸ್ಥಿತಿಯಲ್ಲಿ ಇರುವೆವು’ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಸಲಹೆಗಾರರಾಗಿರುವ ರಜಾಕ್‌ ದಾವೂದ್‌ ಹೇಳಿರುವುದನ್ನು ಉಲ್ಲೇಖೀಸಿ ಅನೇಕ ಸುದ್ದಿ ವಾಹಿನಿಗಳು ವರದಿ ಮಾಡಿವೆ. 

ಪ್ರಧಾನಿ ಇಮ್ರಾನ್‌ ಖಾನ್‌ ನ.4ರಂದು ಚೀನಕ್ಕೆ ಭೇಟಿ ನೀಡಲಿದ್ದಾರೆ. ಆಗ ನಾವು ಚೀನದ ವಾಣಿಜ್ಯ ಪಾಲುದಾರ ದೇಶವಾಗಿ ಸುಂಕ ಸಮರದ ಲಾಭವನ್ನು ಹೊಡೆದುಕೊಳ್ಳುವೆವು ಎಂದು ದಾವೂದ್‌ ಅವರು ಕೈಗಾರಿಕೆ ಮತ್ತು ಉತ್ಪಾದನೆಯ ಸ್ಥಾಯಿ ಸೆನೆಟ್‌ ಸಮಿತಿಯ ಮುಂದೆ ಹೇಳಿದರು. ಚೀನವು ಪಾಕಿಸ್ಥಾನದಿಂದ ಮಾಡುತ್ತಿರುವ ಆಮದನ್ನು ಕನಿಷ್ಠ 2 ಶತಕೋಟಿ ಡಾಲರ್‌ಗೆ ಏರಿಸಬೇಕು ಎಂದು ಇಸ್ಲಾಮಾಬಾದ್‌ ಬಯಸುತ್ತದೆ ಎಂದು ದಾವೂದ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next