Advertisement

ಮೈದಾನದಲ್ಲಿ ಆಟಗಾರರ ದುರ್ಮರಣ ಏರುತ್ತಿದೆ: ಕಾರಣ?

07:55 PM Jan 03, 2020 | Team Udayavani |

ಇತ್ತೀಚೆಗಿನ ವರ್ಷಗಳಲ್ಲಿ ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿದ್ದಾಗಲೇ ಆಟಗಾರರು ದುರ್ಮರಣ ಹೊಂದುತ್ತಿರುವುದು, ಸಾಮಾನ್ಯವಾಗಿದೆ. ಈ ಹಿಂದೆ ಬಹಳ ಕಡಿಮೆಯಿದ್ದ ಈ ಪ್ರಮಾಣ, ಈಗ ವಿಪರೀತವಾಗಿರು­ವುದು ಆತಂಕ ಮೂಡಿಸಿದೆ. ಹಲವು ಪ್ರಶ್ನೆಗಳನ್ನೂ ಮೂಡಿಸಿದೆ. ಕ್ರಿಕೆಟ್‌ನಲ್ಲಿ ಚೆಂಡು ಬಡಿದು ಹಲವರು ನಿಧನ ಹೊಂದಿದ್ದಾರೆ.

Advertisement

ಇತರೆ ಕ್ರೀಡೆಗಳಲ್ಲಿ ಹೃದಯಾಘಾತ/ಸ್ತಂಭನದಿಂದ ಆಟಗಾರರು ನಿಧನ ಹೊಂದುತ್ತಿದ್ದಾರೆ. ಇತ್ತೀಚೆಗೆ ಕೋಲಾರದ ಶ್ರೀನಿವಾಸಪುರದಲ್ಲಿ ನಡೆದ ಟೆನಿಸ್‌ ಚೆಂಡಿನ ಕ್ರಿಕೆಟ್‌ ಪಂದ್ಯದಲ್ಲಿ ಆಟಗಾರರಿಬ್ಬರು ಪರಸ್ಪರ ಗುದ್ದಿಕೊಂಡು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಡಿ.30ರಂದು ಕೇರಳದ ಮಲಪ್ಪುರಂನಲ್ಲಿ 39 ವರ್ಷದ ಫ‌ುಟ್‌ಬಾಲಿಗ ಆರ್‌.ಧನರಾಜನ್‌, ಆಡುತ್ತಿರುವಾಗಲೇ ಹೃದಯಸ್ತಂಭನಕ್ಕೊಳಗಾಗಿ ಸಾವನ್ನಪ್ಪಿದ್ದರು.

2014, ನ.25ರಲ್ಲಿ ಆಸ್ಟ್ರೇಲಿಯ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ಖ್ಯಾತ ಬ್ಯಾಟ್ಸ್‌ಮನ್‌ ಫಿಲಿಪ್‌ ಹ್ಯೂಸ್‌ ತಲೆಗೆ, ಚೆಂಡು ಬಡಿದಿತ್ತು. ಅದರ ಹೊಡೆತಕ್ಕೆ ಅಲ್ಲೇ ಕುಸಿದುಬಿದ್ದ ಅವರು, ಕೆಲವು ದಿನ ಆಸ್ಪತ್ರೆಯಲ್ಲಿ ಹೋರಾಡಿ ದೇಹತ್ಯಜಿಸಿದರು. ಇದು ಕ್ರಿಕೆಟ್‌ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿ, ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟು ಹಾಕಿತ್ತು.

ಅದಕ್ಕೂ ಮೊದಲು ಕ್ರಿಕೆಟ್‌ ಜಗತ್ತಿನಲ್ಲಿ ನಡೆದಿದ್ದ ಘೋರ ಸಾವೆಂದರೆ, ಭಾರತದ ಮಾಜಿ ಕ್ರಿಕೆಟಿಗ ರಮಣ್‌ ಲಾಂಬಾ ಅವರದ್ದು. ಇಲ್ಲೂ ತಲೆಗೆ ಚೆಂಡು ಬಡಿದೇ ಸಾವು ಸಂಭವಿಸಿದ್ದು. ಇತ್ತೀಚೆಗೆ ಹೀಗೆ ಮೈದಾನದಲ್ಲಿ ಸಾಯುವವರ ಸಂಖ್ಯೆ ಹೆಚ್ಚಿದ್ದು ಹೇಗೆ? ಒತ್ತಡವೋ? ಬೇಜವಾ­ಬ್ದಾರಿಯೋ? ಅಸುರಕ್ಷಿತಸ್ಥಿತಿಯೋ?

ಬಾಂಗ್ಲಾ ಲೀಗ್‌ನಲ್ಲಿ ಆಡುವಾಗ ಲಾಂಬಾ ಸಾವು: ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದ ಲಾಂಬಾ, ಮೃತಪಟ್ಟಿದ್ದು ಬಾಂಗ್ಲಾದೇಶದ ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವಾಗ!ಪಂದ್ಯವೊಂದರಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಅವರು ಹೆಲ್ಮೆಟ್‌ ಧರಿಸಿರಲಿಲ್ಲ. ಆಗ ಬ್ಯಾಟ್ಸ್‌ಮನ್‌ ಹೊಡೆದ ಚೆಂಡು ತಲೆಗೆ ಬಡಿದು, ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆ 1998, ಫೆ.23ರಂದು ಸಂಭವಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next