Advertisement
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ 20ಕ್ಕೂ ಹೆಚ್ಚು ಮಂದಿ ಸಂಸದರು ಅವರಿಗೆ ಬೆಂಬಲ ನೀಡಿದ್ದಾರೆ. ಬ್ರಿಟನ್‌ನ ಯಾರ್ಕ್‌ಶೈರ್‌ನಲ್ಲಿರುವ ರಿಚ್‌ಮಂಡ್ ಕ್ಷೇತ್ರದ ಸಂಸದರಾಗಿರುವ ಅವರು, ಪ್ರಧಾನಿ ಹುದ್ದೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಅವರೇ ಮುಂಚೂಣಿಯಲ್ಲಿ ಇದ್ದಾರೆ. ಅವರ ಜತೆಗೆ ಪ್ರತಿಸ್ಪರ್ಧಿಗಳಾಗಿ ವಾಣಿಜ್ಯ ಸಚಿವ ಪೆನ್ನಿ ಮಾರ್ಡೆಂಟ್, ವಿತ್ತ ಸಚಿವ ನದೀಮ್ ಝಹಾವಿ, ಟಾಂ ಟಗ್ನೇಧಟ್ ಇದ್ದಾರೆ. ಅವರ ಜತೆಗೆ ಭಾರತೀಯ ಮೂಲದ ಸ್ವೆಲ್ಲಾ ಬ್ರವೆರ್ಮಾನ್, ವಿದೇಶಾಂಗ ಸಚಿವೆ ಲಿಜ್ ಟ್ರಸ್ ಸೇರಿದಂತೆ ಪ್ರಮುಖರು ಇದ್ದಾರೆ.
ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯ ಹೆಸರನ್ನು ಸೆ.5ರಂದು ಪ್ರಕಟಿಸಲಾಗುತ್ತದೆ. ಈ ಬಗ್ಗೆ ಟೋರಿ ನಾಯಕನನ್ನು ಆಯ್ಕೆ ಮಾಡುವ ಸಮಿತಿ, “1922 ಸಮಿತಿ’ ಪ್ರಕಟಿಸಿದೆ. ಈ ಸಮಿತಿ ನೂತನ ಪ್ರಧಾನಮಂತ್ರಿಯ ಆಯ್ಕೆಗೆ ಸಂಬಂಧಿಸಿದಂತೆ ಇರುವ ನಿಯಮಗಳು ಮತ್ತು ಚುನಾವಣೆಗಳ ವಿವರಗಳನ್ನು ಈಗಾಗಲೇ ಪ್ರಕಟಿಸಿದೆ. ಒಟ್ಟು ರಿಷಿ ಸುನಕ್ ಸೇರಿದಂತೆ 11 ಮಂದಿ ಪ್ರಧಾನಿ ಹುದ್ದೆಗೆ ಚುನಾವಣೆಗಾಗಿ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ.