– ಗಣಪತಿ ಭಟ್ , ಅಧ್ಯಕ್ಷರು,
ಕನ್ನಡಿಗರು ಯುಕೆ ಲಂಡನ್,
Advertisement
ಭಾರತೀಯರ ಹೆಮ್ಮೆಯ ಕ್ಷಣಲಂಡನ್ನಲ್ಲಿದ್ದು ಭಾರತೀಯನಾಗಿ ನನಗೆ ವರ್ಣಿಸಲಾಗದ ಸಂದರ್ಭ. ಎಲ್ಲ ಭಾರತೀಯರ ಹೆಮ್ಮೆಯ ಕ್ಷಣ. ಇತಿಹಾಸದಲ್ಲೇ ಅತಿ ಕಿರಿಯ, ಭಾರತೀಯ ಮೂಲದ ಮೊದಲ ಪ್ರಧಾನಿ ಆಗಿ ಆಯ್ಕೆಯಾಗುವ ಮೂಲಕ ರಿಷಿ ಅವರು ಭಾರತೀಯರು ಅವಕಾಶ ಇದ್ದಲ್ಲಿ ಸಾಧಿಸಿ ತೋರಿಸಬಲ್ಲರು ಎಂದು ನಿರೂಪಿಸಿದವರು. ಈ ಮೂಲಕ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಎಂಬ ಗಾಜಿನ ಆವರಣದ ಕ್ಲೀಷೆ ಮಾತಿನಿಂದ ಹೊರಬಂದು ಬ್ರಿಟಿಷರನ್ನೇ ಆಳಿದ ಭಾರತೀಯ ಎಂಬ ನವ ಇತಿಹಾಸ ಬರೆಯುವವರು. ಈ ಹಿಂದೆ ಭಾರತೀಯರು ಎಂಪಿಗಳಾಗಿದ್ದರೂ ಪ್ರಧಾನಿ ಹುದ್ದೆಯ ಸನಿಹಕ್ಕೂ ಹೋಗಿರಲಿಲ್ಲ. ರಿಷಿ ಆ ನಿಟ್ಟಿನಲ್ಲಿ ಸ್ವರ್ಣಾಕ್ಷರದ ದಾಖಲೆ ಬರೆದಿದ್ದಾರೆ.
-ಪವನ್ ಕುಮಾರ್ ಮೂಡ್ಲಕಟ್ಟೆ
ಲಂಡನ್‌ನಲ್ಲಿ ಐಟಿ ಉದ್ಯೋಗಿ
ಗೌರವಾನ್ವಿತ ಸಂಸದ ರಾದ ರಿಷಿ ಸುನಕ್ ರವರು ಪ್ರಧಾನಿ ಯಾಗಿರುವುದು ಹೆಮ್ಮೆಯ ವಿಚಾರ .ಬ್ರಿಟನ್ ರಾಜಕಾರಣವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ.ಭಾರತೀಯ ಮೂಲ ಎಂಬ ಮಾತ್ರಕ್ಕೆ ರಿಷಿ ಯವರನ್ನು ಕಡೆಗಣಿಸದೆ ಇಂದು ಪ್ರಧಾನಿಯಾಗಿ ಆಯ್ಕೆಯಾಗಲು ಇಲ್ಲಿನ ಪ್ರಜಾ ಪ್ರಭುತ್ವ ವ್ಯವಸ್ಥೆ ಕಲ್ಪಿಸಿದೆ.ನಾನು ಅವರನ್ನು ಹಲವು ಸಲ ಭೇಟಿಯಾಗಿ ಮಾತನಾಡಿದ್ದೇನೆ. ಭಾರತೀಯ ಮೂಲದವರೆಂಬ ಮಾತ್ರಕ್ಕೆ ಅವರಿಂದ ಭಾರತ ಏನನ್ನು ಅಪೇಕ್ಷಿಸಬಾರದು. ಆದರೆ ರಾಜತಾಂತ್ರಿಕವಾಗಿ ಭಾರತ ಮತ್ತು ಬ್ರಿಟನ್ ದೇಶಗಳ ವ್ಯಾವಹಾರಿಕ ಹಾಗೂ ಸಾಂಸ್ಕೃತಿಕ ಪುನಶ್ಚೇತನಕ್ಕೆ ವಿಫುಲವಾದ ಅವಕಾಶ ಖಂಡಿತ ಇದೆ. ಇದನ್ನು ಎರಡು ರಾಷ್ಟ್ರಗಳ ನಾಯಕರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
-ಕುಮಾರ್ ಕುಂಟಿಕಾನಮಠ
ಮಾಜಿ ಕೌನ್ಸಿಲರ್, ಫ್ಲೀಟ್ ಟೌನ್ ಕೌನ್ಸಿ
ಯುನೈಟೆಡ್ ಕಿಂಗ್‌ಡಮ್ ಕತ್ತಲೆ ಕಳೆಯಲಿದೆ
ಯುಕೆ ಈಗ ಆರ್ಥಿಕ ನಿರ್ವಹಣೆಯ ಸಂಕಷ್ಟದಲ್ಲಿದೆ. ದೀಪಾವಳಿ ಸಂದರ್ಭದಲ್ಲಿ ಆಯ್ಕೆಯಾದ ಮೊದಲ ಭಾರತೀಯ ಮೂಲದ, ಮೊದಲ ಹಿಂದೂ ಪ್ರಧಾನಿ ರಿಷಿ ಬ್ರಿಟನ್‌ನ ಆರ್ಥಿಕ ಕತ್ತಲೆಯನ್ನು ಕಳೆದು ಸುಧಾರಣೆಯ ದೀಪ ಬೆಳಗಲಿದ್ದಾರೆ ಎಂದು ಎಲ್ಲರ ನಂಬಿಕೆ. ತಂತ್ರಜ್ಞಾನ ಆಧಾರಿತ ಸುಧಾರಣೆಯ ಅರಿವಿರುವ ಅವರಿಂದ ಇದು ಸಾಧ್ಯ. ಆಗ ಮಗದೊಮ್ಮೆ ಭಾರತೀಯರ ಹೆಮ್ಮೆ ಧ್ವನಿಸಲಿದೆ.
-ಡಾ| ಆಸೋಡು ಅನಂತ್ರಾಮ ಶೆಟ್ಟಿ
ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರು, ಲಂಡನ್
Related Articles
ರಿಷಿ ಪ್ರಧಾನಿಯಾಗಿ ಆಯ್ಕೆಯಾದ ಸುದ್ದಿ, ಭಾರತೀಯ ಮೂಲದವರಿಗೆಲ್ಲರಿಗೂ ದೀಪಾವಳಿ ಉಡುಗೊರೆಯಾಗಿದೆ! ಮೊದಲ ಬಾರಿಗೆ ಅವರು ಚಾನ್ಸಲರ್ (ವಿತ್ತ ಮಂತ್ರಿ, ಅನ್ನಿ) ಅಂದ ನೇಮಕವಾದಾಗಲೇ ಅವರ ಪ್ರಾಮಾಣಿಕ ವ್ಯಕ್ತಿತ್ವ, ಗಾಂಭಿರ್ಯದ ಝಲಕ್ ಸಿಕ್ಕಿತ್ತು. ಕೋವಿಡ್ ಕಾಲದಲ್ಲಿ ತತ್ತರಿಸಿದ ಯುಕೆಗೆ ದಾರಿತೋರಿಸಿ ಉಪದೇಶಕೊಟ್ಟು ಜಯಿಸಿದವರು ಎಂದು ನನಗೆ ಹೆಮ್ಮೆ. ಸೆಪ್ಟೆಂಬರ್‌ನಲ್ಲಿ ಅವರ ತಂದೆ ತಾಯಿಯವರನ್ನು ಸುಧಾ ಮೂರ್ತಿಯವರೊಡನೆ ಭೇಟಿಯಾಗಿ ಮಾತನಾಡಲು ಸುಯೋಗ ಒದಗಿ ಬಂದಿತ್ತು. ನಿನ್ನೆ ರಾತ್ರಿಯಿಂದ ಕಾಣುತ್ತಿದ್ದ ಕನಸು ನನಸಾಗಿದೆ.
-ಶ್ರೀವತ್ಸ ದೇಸಾಯಿ, ಯುಕೆ
Advertisement
ಬ್ರಿಟನ್ ಪಾಲಿಗೆ ಐತಿಹಾಸಿಕ ದಿನದೀಪಾವಳಿ ದಿನದಂದು ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಬ್ರಿಟನ್ ಪಾಲಿಗೆ ಐತಿಹಾಸಿಕ ದಿನವಾಗಿದೆ. ಸುನಕ್ ಈ ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿಯಾಗಿದ್ದಾರೆ. ಯುಕೆಯಲ್ಲಿರುವ ಎಲ್ಲ ಅನಿವಾಸಿ ಭಾರತೀಯರಿಗೆ ಇದು ತುಂಬಾ ಹೆಮ್ಮೆಯ ಕ್ಷಣವಾಗಿದೆ. ಆರ್ಥಿಕತೆ ಸಂಬಂಧಿಸಿ ಪ್ರಸ್ತುತ ಯುಕೆಯಲ್ಲಿ ತುಂಬಾ ಸವಾಲಿನ ಪರಿಸ್ಥಿತಿ ಇದೆ ಮತ್ತು ರಿಷಿ ಬಹುಶಃ ಉನ್ನತ ಸ್ಥಾನದಲ್ಲಿ ಸ್ಥಿರತೆಯನ್ನು ಒದಗಿಸಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಅವರು ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ. ಅವರು ಕರ್ನಾಟಕದೊಂದಿಗೂ ನಿಕಟ ಸಂಪರ್ಕ ಹೊಂದಿರುವುದರಿಂದ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ.
-ಅನೂಪ್ ಭಟ್, ಸೀನಿಯರ್ ಟೆಕ್ನಿಕಲ್ ಮ್ಯಾನೇಜರ್ ಶ್ನಿàಡರ್ ಎಲೆಕ್ಟ್ರಿಕ್ ಸಿಸ್ಟಂ