ನಟ ರಿಷಿ ಈಗ ವೆಬ್ ಸೀರಿಸ್ ನತ್ತ ಮುಖ ಮಾಡಿದ್ದಾರೆ. ಶೈತಾನ್ ಎಂಬ ತೆಲುಗು ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ಶೈತಾನ್ ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸರಣಿಯಲ್ಲಿ ರಿಷಿ ಬಾಲಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಾಯಕ ಹಾಗೂ ಖಳನಾಯಕ ಎರಡು ಶೇಡ್ ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಕಂಪ್ಲೀಟ್ ಮಾಸ್ ಅವತರಾದಲ್ಲಿ ಕಾಣಿಸಿ ಕೊಂಡಿದ್ದಾರೆ. ಜೂನ್ 15ರಂದು ಶೈತಾನ್ ಪ್ರಸಾರ ಆಗಲಿದೆ. ತೆಲುಗು ಭಾಷೆ ಜೊತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸರಣಿ ಮೂಡಿಬರಲಿದೆ.
ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ ಭಾಗವಾಗಿದ್ದಾರೆ. ರಿಷಿ ಸಿನಿಮಾಗಳನ್ನು ನೋಡಿ ಥ್ರಿಲ್ ಆಗಿದ್ದ ನಿರ್ದೇಶಕ ಮಹಿ ರಾಘವ್ ತಮ್ಮ ವೆಬ್ ಸಿರೀಸ್ ತಾವೇ ನಟಿಸುವ ಆಫರ್ ಕೊಟ್ಟಿದ್ದು, ಅದರಂತೆ ಈಗ ರಿಷಿ ಶೈತಾನ್‌ನಲ್ಲಿ ನಟಿಸುತ್ತಿದ್ದಾರೆ.
ಸದ್ಯ ರಿಷಿ ನಟನೆಯ “ರಾಮನ ಅವತಾರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ರಾಮ ಈಸ್ ಜಂಟಲ್ ಮ್ಯಾನ್ ಎಂಬ ಹಾಡನ್ನು ನಾಗಾರ್ಜುನ ಶರ್ಮ ರಚಿಸಿದ್ದಾರೆ.