Advertisement

T20 ; ಜೈಸ್ವಾಲ್, ಗಿಲ್ ಕಮಾಲ್: ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಯುವ ಭಾರತ

07:34 PM Jul 13, 2024 | Team Udayavani |

ಹರಾರೆ: ಇಲ್ಲಿನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದಲ್ಲಿ ಅಮೋಘ ಆಟವಾಡಿದ ಭಾರತ ತಂಡ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ 3-1 ಅಂತರದಿಂದ ಸರಣಿ ಗೆದ್ದು ಸಂಭ್ರಮಿಸಿದೆ.

Advertisement

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಿಂಬಾಬ್ವೆ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ ಜಯ ತನ್ನದಾಗಿಸಿಕೊಂಡಿತು. ಅಮೋಘ ಆಟವಾಡಿದ ಯಶಸ್ವಿ ಜೈಸ್ವಾಲ್ 93 ರನ್(53 ಎಸೆತ) , ನಾಯಕ ಶುಭಮನ್ ಗಿಲ್ 58 ರನ್(39 ಎಸೆತ) ಗಳಿಸಿದರು.

ಜಿಂಬಾಬ್ವೆಯ ಪರ ಮಾಧವೆರ್ 25, ಟಿ ಮರುಮಾನಿ 32, ನಾಯಕ ಸಿಕಂದರ್ ರಝ 46 ರನ್ ಗಳಿಸಿದರು. ಡಿಯೋನ್ ಮೈಯರ್ಸ್ 12 ರನ್ ಗಳಿಸಿದರು.

ಭಾರತದ ಪರ ಖಲೀಲ್ ಅಹ್ಮದ್ 2, ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮ,ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

Advertisement

ತುಷಾರ್ ಪಾದಾರ್ಪಣೆ
ತುಷಾರ್ ದೇಶಪಾಂಡೆ ಟಿ 20 ಪದಾರ್ಪಣೆ ಮಾಡಿದರು. ದೇಶಪಾಂಡೆ ಅವರು ಅವೇಶ್ ಖಾನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದರು.

 

Advertisement

Udayavani is now on Telegram. Click here to join our channel and stay updated with the latest news.

Next