Advertisement

TeamIndia; ರೋಹಿತ್ ಗೆ ವಿಶ್ರಾಂತಿರಜೆ ನೀಡದ ಗಂಭೀರ್; ಪಾಂಡ್ಯ ಕೈತಪ್ಪುತ್ತಾ ಟಿ20 ನಾಯಕತ್ವ?

12:20 PM Jul 18, 2024 | Team Udayavani |

ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ (Sri Lanka Tour) ಆರಂಭವಾಗಲಿದೆ. ಪ್ರವಾಸದಲ್ಲಿ ಭಾರತವು ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇನ್ನು ಕೆಲವೇ ದಿನಗಳಲ್ಲಿ ಉಭಯ ತಂಡಗಳನ್ನು ಬಿಸಿಸಿಐ (BCCI) ಪ್ರಕಟಿಸಲಿದೆ.

Advertisement

ಟೀಂ ಇಂಡಿಯಾದ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಲಂಕಾ ಸರಣಿಯ ಭಾಗವಾಗುವುದಿಲ್ಲ ಎನ್ನಲಾಗಿತ್ತು. ಸತತ ಕ್ರಿಕೆಟ್ ಆಡುತ್ತಿರುವ ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಲಂಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಅವರು ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ರೋಹಿತ್ ಶರ್ಮಾ ಅವರು ಏಕದಿನ ಸರಣಿಯ ಭಾಗವಾಗಲಿದ್ದಾರೆ ಎನ್ನಲಾಗಿದೆ.

2025ರ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ಕೇವಲ ಆರು ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ರೋಹಿತ್ ಅವರು ಲಂಕಾ ಸರಣಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ. ಆದರೆ ವಿರಾಟ್ ಕೊಹ್ಲಿ ಮತ್ತು ಬುಮ್ರಾ ಅವರ ವಿಶ್ರಾಂತಿ ಮುಂದುವರಿಯಲಿದೆ.

ಇದಲ್ಲದೆ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್ ತ್ಯಜಿಸಿದ ಕಾರಣದಿಂದ ಹೊಸ ನಾಯಕನ ನೇಮಕವೂ ಆಗಬೇಕಿದೆ. ಇದುವರೆಗೆ ಟಿ20 ತಂಡದ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಪದೋನ್ನತಿ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಸದ್ಯದ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ನ ಮತ್ತೊಬ್ಬ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ನಾಯಕತ್ವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

Advertisement

ಫಿಟ್ನೆಸ್ ಕಾರಣದಿಂದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಹೀಗಾಗಿ 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯಕುಮಾರ್ ಗೆ ಪಟ್ಟ ಕಟ್ಟಲು ಉದ್ದೇಶಿಸಲಾಗಿದೆ.

ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಬ್ಬರೂ ಯೋಜನೆಯ ಬದಲಾವಣೆಯ ಬಗ್ಗೆ ಪಾಂಡ್ಯ ಅವರೊಂದಿಗೆ ಮಾತನಾಡಿದ್ದಾರೆ. ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ದೀರ್ಘಾವಧಿಯ ಆಯ್ಕೆಯನ್ನು (ಸೂರ್ಯ) ಅಂತಿಮಗೊಳಿಸಲಾಗುತ್ತಿದೆ ಎಂದು ಪಾಂಡ್ಯಗೆ  ವಿವರಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next