Advertisement

ಹೀರೋ ಆಗಿಬಿಟ್ರಲ್ಲಾ ರಿಷಭ್‌!

03:30 PM Sep 11, 2020 | Suhan S |

ರಿಷಭ್‌ ಶೆಟ್ಟಿ ಈಗ ಹೀರೋ ಆಗಿದ್ದಾರೆ! ಅವರ ಹೊಸ ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ರಿಷಭ್‌ ಈಗಾಗಲೇ ಹೀರೋ ಆಗಿ ನಟಿಸಿದ್ದಾರಲ್ಲ ಎಂದು ನೀವು ಕೇಳಬಹುದು. ಅದು ಸರಿಯೇ. ನಾವು ಹೇಳುತ್ತಿರೋದು ರಿಷಭ್‌ ಹೊಸ ಸಿನಿಮಾ ಬಗ್ಗೆ.

Advertisement

ಹೌದು, ರಿಷಭ್‌ ಶೆಟ್ಟಿ ಸದ್ದಿಲ್ಲದೇ ಹೊಸಸಿನಿಮಾ ಮುಗಿಸಿದ್ದಾರೆ. ಆ ಸಿನಿಮಾದ ಹೆಸರು “ಹೀರೋ’. ಕಾಮಿಡಿ ಡ್ರಾಮಾ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾವನ್ನು ಭರತ್‌ರಾಜ್‌ನಿರ್ದೇಶಿಸಿದ್ದಾರೆ. ಭರತ್‌ ಈ ಹಿಂದೆ ರಿಷಭ್‌ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಕೆಲಸ ಮಾಡಿದ್ದರು. ಈಗ “ಹೀರೋ ‘ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರವನ್ನು ರಿಷಭ್‌ಶೆಟ್ಟಿಯವರೇ ತಮ್ಮ ರಿಷಭ್‌ ಶೆಟ್ಟಿ ಫಿಲಂಸ್‌ ಬ್ಯಾನರ್‌ನಡಿ ನಿರ್ಮಿಸಿದ್ದಾರೆ.

ಜುಲೈನಲ್ಲಿ ಚಿತ್ರೀಕರಣ ಆರಂಭಿಸಿದ ಚಿತ್ರ ಸತತ 50 ದಿನಗಳ ಚಿತ್ರೀಕರಣವನ್ನು ಮುಗಿಸಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಬಂದು ನಿಂತಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚಿಕ್ಕಮಗಳೂರು, ಬೇಲೂರು ಸುತ್ತಮುತ್ತ ನಡೆದಿದೆ. ಚಿತ್ರದಲ್ಲಿ ರಿಷಭ್‌ಗೆ ಜೋಡಿಯಾಗಿ ಗಾನವಿ ಲಕ್ಷ್ಮಣ್‌ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ, ಉಗ್ರಂ ಮಂಜು ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ವಿಕ್ರಂ ಮೋರ್‌ ಸಾಹಸವಿದೆ.­

Advertisement

Udayavani is now on Telegram. Click here to join our channel and stay updated with the latest news.

Next