ಲಂಡನ್: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಸದ್ಯ ರಿಷಭ್ ಪಂತ್ ಅವರು ಸದ್ಯ ಐಸಲೋಶನ್ ನಲ್ಲಿದ್ದಾರೆಂದು ವರದಿ ತಿಳಿಸಿದೆ.
ಜುಲೈ 20ರಂದು ಭಾರತ ತಂಡ ಕೌಂಟಿ ಚಾಂಪಿಯನ್ ಶಿಪ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ಡರ್ಹಮ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಿಷಭ್ ಪಂತ್ ಆಡುವುದಿಲ್ಲ ಎಂದು ವರದಿ ತಿಳಿಸಿದೆ.
ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಬಳಿಕ ಭಾರತ ತಂಡದ ಆಟಗಾರರು ಬಯೋ ಬಬಲ್ ನಿಂದ ಹೊರ ಬಂದಿದ್ದರು. ಪಂತ್ ಯೂರೋ ಕಪ್ ನ ಇಂಗ್ಲೆಂಡ್- ಜರ್ಮನಿ ನಡವಿನ ಪಂದ್ಯವನ್ನು ಸ್ನೇಹಿತರ ಜೊತೆ ವೀಕ್ಷಿಸಿದ್ದರು.
ಇದನ್ನೂ ಓದಿ:ರೋಚಕ ಕದನದಲ್ಲಿ ವಿಂಡೀಸ್ ವಿರುದ್ಧ ನಾಲ್ಕು ರನ್ ಗಳ ಜಯ ಸಾಧಿಸಿದ ಆಸೀಸ್
“ಹೌದು, ಒಬ್ಬ ಆಟಗಾರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಆದರೆ ಕಳೆದ ಎಂಟು ದಿನಗಳಿಂದ ಆತ ತಂಡದಿಂದ ಪ್ರತ್ಯೇಕವಾಗಿದ್ದಾ. ಅವನು ತಂಡದೊಂದಿಗೆ ಯಾವುದೇ ಹೋಟೆಲ್‌ನಲ್ಲಿ ಇರಲಿಲ್ಲ, ಆದ್ದರಿಂದ ಬೇರೆ ಯಾವ ಆಟಗಾರನೂ ಪರಿಣಾಮ ಬೀರಲಿಲ್ಲ” ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.