Advertisement

IPL 2024 : ಅಪಘಾತದ ಬಳಿಕ ಮೊದಲ ಬಾರಿಗೆ ಸಂಪೂರ್ಣವಾಗಿ ಅಭ್ಯಾಸ ಪಂದ್ಯದಲ್ಲಿ ತೊಡಗಿಕೊಂಡ ಪಂತ್

06:53 PM Feb 20, 2024 | Team Udayavani |

ಮುಂಬಯಿ: ಟೀಮ್‌ ಇಂಡಿಯಾದ ಸ್ಟಾರ್‌ ವಿಕೆಟ್‌ – ಕೀಪರ್‌ ಬ್ಯಾಟರ್‌ ರಿಷಭ್ ಪಂತ್‌ ಈ ವರ್ಷದ ಐಪಿಎಲ್‌ ನಲ್ಲಿ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಆ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಕಂಬ್ಯಾಕ್‌ ಮಾಡಲಿದ್ದಾರೆ.

Advertisement

2022 ರಲ್ಲಿ ನಡೆದ ಕಾರು ಅಪಘಾತದ ಬಳಿಕ ಇದೇ ಮೊದಲ  ಬಾರಿಗೆ ಪಂತ್ ಸಂಪೂರ್ಣವಾಗಿ ಮೈದಾನದಲ್ಲಿ  ಅಭ್ಯಾಸವನ್ನು ನಡೆಸಿದ್ದಾರೆ. ಬೆಂಗಳೂರು ಸಮೀಪದ ಆಲೂರಿನಲ್ಲಿ ಪಂತ್‌ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿರುವುದಾಗಿ ʼಕ್ರಿಕ್‌ ಬಜ್‌ʼ ವರದಿ ತಿಳಿಸಿದೆ.

ವರದಿಯ ಪ್ರಕಾರ ಪಂತ್‌ ಈ ಬಾರಿಯ ಐಪಿಎಲ್‌ ನಲ್ಲಿ ಬ್ಯಾಟರ್‌ ಆಗಿ ಮಾತ್ರ ಮೈದಾನಕ್ಕೆ ಇಳಿಯಲಿದ್ದಾರೆ. ಆದರೆ ವಿಕೆಟ್‌ ಕೀಪಿಂಗ್‌ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಲ್ಲದೆ ಅವರು ಡೆಲ್ಲಿ ತಂಡವನ್ನು ಕಪ್ತಾನನಾಗಿ ಈ ಬಾರಿ ಮುನ್ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Deepfake: ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುವ ವಿರಾಟ್‌ ಕೊಹ್ಲಿ ಡೀಪ್‌ ಫೇಕ್‌ ವಿಡಿಯೋ ವೈರಲ್

ಪಂತ್‌ ಮತ್ತೆ ಅಭ್ಯಾಸದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಟೀಮ್‌ ಇಂಡಿಯಾದ ಅಭಿಮಾನಿಗಳು ಖುಷ್‌ ಆಗಿದ್ದಾರೆ.

Advertisement

ಐಪಿಎಲ್‌ -17  ಇದೇ ಮಾರ್ಚ್‌ 22 ರಿಂದ ಆರಂಭಗೊಳ್ಳಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ.

ಎಪ್ರಿಲ್ -ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಎರಡು ಹಂತದಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಅರುಣ್ ಧುಮಾಲ್ ಹೇಳಿದರು. ಮೊದಲ 15 ದಿನದ ವೇಳಾಪಟ್ಟಿಯು ಮೊದಲು ಘೋಷಣೆಯಾಗಲಿದೆ. ಉಳಿದ ವೇಳಾಪಟ್ಟಿಯು ಲೋಕಸಭಾ ಚುನಾವಣೆಯ ಪಟ್ಟಿ ಬಿಡುಗಡೆಯಾದ ಬಳಿಕ ರಿಲೀಸ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next