Advertisement

ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್

05:02 PM Dec 25, 2021 | Team Udayavani |

ಸೆಂಚೂರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ರವಿವಾರದಿಂದ ಆರಂಭವಾಗಲಿದೆ. ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಇದೇ ವೇಳೆ ಭಾರತದ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಹೊಸ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

Advertisement

ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಇದುವರೆಗೆ 97 ಡಿಸ್ಮಿಸಲ್ ಗಳಿಗೆ ಕಾರಣರಾಗಿದ್ದಾರೆ. (89 ಕ್ಯಾಚ್+8 ಸ್ಟಂಪಿಂಗ್) ಇನ್ನು ಕೇವಲ ಮೂರು ಬಲಿ ಪಡೆದರೆ 100ರ ಸಾಧನೆ ಮಾಡುತ್ತಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಆರನೇ ಭಾರತೀಯ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ:ನಿರ್ಮಾಪಕ ಗುರು ದೇಶಪಾಂಡೆ ನನಗೆ ಅವಮಾನ ಮಾಡಿದ್ದಾರೆ: ನಟ ಅಜಯ್ ರಾವ್

ಇದರೊಂದಿಗೆ ಅತೀ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ಪಂತ್ ಮಾಡಲಿದ್ದಾರೆ. ಪಂತ್ ಅವರು 25 ಪಂದ್ಯಗಳಿಂದ 97 ಬಲಿ ಪಡೆದಿದ್ದಾರೆ. ಧೋನಿ 36 ಪಂದ್ಯಗಳಿಂದ100 ಡಿಸ್ಮಿಸಲ್ ಸಾಧನೆ ಮಾಡಿದ್ದರೆ, ವೃದ್ಧಿಮಾನ್ ಸಹಾ (37), ಕಿರಣ್ ಮೋರೆ (39), ನಯನ್ ಮೊಂಗಿಯಾ (41) ಮತ್ತು ಸೈಯದ್ ಕಿರ್ಮಾನಿ (42) ಪಂದ್ಯಗಳಲ್ಲಿ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next