Advertisement

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

01:09 PM Sep 21, 2024 | Team Udayavani |

ಚೆನ್ನೈ: 634 ದಿನಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ ಆಡಲಿಳಿದ ವಿಕೆಟ್‌ ಕೀಪರ್‌ ಬ್ಯಾಟರ್‌ ಬ್ಯಾಟರ್‌ ರಿಷಭ್‌ ಪಂತ್‌ ಶತಕ ಬಾರಿಸಿ ತನ್ನ ಪುನರಾಗಮನ ಸಾರಿದ್ದಾರೆ. ಬಾಂಗ್ಲಾ ವಿರುದ್ದದ ಮೊದಲ ಟೆಸ್ಟ್‌ ನ ಎರಡನೇ ಇನ್ನಿಂಗ್ಸ್‌ ನಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಅವರೊಂದಿಗೆ ಶುಭಮನ್‌ ಗಿಲ್‌ ಕೂಡಾ ಶತಕ ಹೊಡೆದು ಫಾರ್ಮ್‌ ಗೆ ಮರಳಿದ್ದಾರೆ.

Advertisement

ನಾಲ್ಕು ವಿಕೆಟ್‌ ನಷ್ಟಕ್ಕೆ 287 ರನ್‌ ಮಾಡಿದಾಗ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದೆ. 514 ರನ್‌ ಮುನ್ನಡೆಯಲ್ಲಿದೆ.

ಅಪಘಾತದ ಕಾರಣದಿಂದ ಕ್ರಿಕೆಟ್‌ ನಿಂದ ದೂರ ಉಳಿದಿದ್ದ ರಿಷಭ್‌ ಪಂತ್‌ ಕಳೆದ ಐಪಿಎಲ್‌ ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಮರಳಿದ್ದರು. ಇದೀಗ ಮೊದಲ ಬಾರಿಗೆ ಟೆಸ್ಟ್‌ ಆಡಲಿಳಿದ ಪಂತ್‌ ಮೊದಲ ಇನ್ನಿಂಗ್ಸ್‌ ನಲ್ಲಿ 39 ರನ್‌ ಮಾಡಿದ್ದರು. ಎರಡನೇ ಇನ್ನಿಂಗ್ಸ್‌ ನಲ್ಲಿ ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್‌ ಮಾಡಿದ ಅವರು ಅರ್ಧಶತಕದ ಬಳಿಕ ಭರ್ಜರಿಯಾಗಿ ಬ್ಯಾಟ್‌ ಬೀಸಿದರು.

128 ಎಸೆತ ಎದುರಿಸಿದ ಪಂತ್‌ ನಾಲ್ಕು ಸಿಕ್ಸರ್‌ ನೆರವಿನಿಂದ 109 ರನ್‌ ಗಳಿಸಿದರು. ಮೆಹದಿ ಹಸನ್‌ ಎಸೆತದಲ್ಲಿ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು.

Advertisement

ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಫಾರ್ಮ್‌ ನಲ್ಲಿರದ ಶುಭಮನ್‌ ಗಿಲ್‌ ಕೂಡಾ ಶತಕ ಹೊಡೆದರು. ಮೂರು ಸಿಕ್ಸರ್‌ ಮತ್ತು 10 ಬೌಂಡರಿ ನೆರವಿನಿಂದ 161 ಎಸೆತಗಳಲ್ಲಿ ಗಿಲ್‌ ಶತಕ ಪೂರೈಸಿದರು. ಅಜೇಯ 119 ರನ್‌ ಗಳಿಸಿದ ಅವರಯ ಪಂತ್‌ ಜತೆಗೆ ನಾಲ್ಕನೇ ವಿಕೆಟ್‌ ಗೆ 167 ರನ್‌ ಜೊತೆಯಾಟವಾಡಿದರು.

ಪಂತ್‌ ದಾಖಲೆ

ಟೆಸ್ಟ್‌ ಕ್ರಿಕೆಟ್‌ ನಲ್ಲಿ ಹೆಚ್ಚು ಶತಕ ಬಾರಿಸಿದ ಭಾರತೀಯ ವಿಕೆಟ್‌ ಕೀಪರ್‌ ಗಳ ಪಟ್ಟಿಯಲ್ಲಿ ಪಂತ್‌ ಮೊದಲ ಸ್ಥಾನಕ್ಕೇರಿದರು. ಪಂತ್‌ 58 ಇನ್ನಿಂಗ್ಸ್‌ ಗಳಲ್ಲಿ ಆರು ಶತಕ ಬಾರಿಸಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ ಅವರು ಆರು ಶತಕಗಳಿಗೆ 144 ಇನ್ನಿಂಗ್ಸ್‌ ಬಳಸಿದ್ದರು.

ಭಾರತ 514 ರನ್ ಲೀಡ್‌ ಹೊಂದಿದ್ದು, ಬಾಂಗ್ಲಾ ಗೆಲುವಿಗೆ 515 ರನ್‌ ಗುರಿ ನೀಡಿದೆ.

ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನ್ನಿಂಗ್ಸ್:‌ 376

ಬಾಂಗ್ಲಾ ಮೊದಲ ಇನ್ನಿಂಗ್ಸ್‌: 149

ಭಾರತ ಎರಡನೇ ಇನ್ನಿಂಗ್ಸ್: 287-4 ಡಿ

Advertisement

Udayavani is now on Telegram. Click here to join our channel and stay updated with the latest news.

Next