Advertisement

ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿ..: ಸೆ.5ಕ್ಕೆ ರಿಷಬ್ ಶೆಟ್ರ ‘ಕಾಂತಾರ’ ದ ಟ್ರೇಲರ್

05:40 PM Sep 01, 2022 | Team Udayavani |

ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಾಂತಾರ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಈಗಾಗಲೇ ಟೀಸರ್ ಮತ್ತು ಸಿಂಗಾರ ಸಿರಿಯೇ ಹಾಡಿನಿಂದ ಸಿನಿ ಪ್ರೇಮಿಗಳ ಗಮನ ಸೆಳೆದಿರುವ ‘ಕಾಂತಾರ’ದ ಟ್ರೇಲರ್ ಸೆ.5ರಂದು ಬೆಳಗ್ಗೆ 11.45ಕ್ಕೆ ಬಿಡುಗಡೆಯಾಗಲಿದೆ.

Advertisement

ಕರಾವಳಿಯ ಕಂಬಳ, ಭೂತಕೋಲ ಸೇರಿದಂತೆ ತೀರ ಮಣ್ಣಿನ ಸೊಗಡಿನ ಕುರಿತಾದ ಚಿತ್ರ ಎನ್ನುವುದನ್ನು ಟೀಸರ್ ನಲ್ಲೇ ಕಾಂತಾರ ಬಿಂಬಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.

ಟ್ರೇಲರ್ ರಿಲೀಸ್ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. “ಧೈರ್ಯ, ಧೈರ್ಯ ಬರುವುದು ನಿನ್ನೊಳಗಿನ ಕಿಚ್ಚಿನಿಂದ. ಆದರೆ, ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿ” ಎಂಬ ಸಾಲುಗಳನ್ನು ಬರೆಯಲಾಗಿದೆ.

ಇದನ್ನೂ ಓದಿ:ಹೊಸ ಚಿತ್ರ ಘೋಷಿಸಿದ ರಕ್ಷಿತ್ ಶೆಟ್ಟಿ: ರಿಷಭ್-ದಿಗಂತ್-ಅಚ್ಯುತ್ ಜೊತೆ ‘ಬ್ಯಾಚುಲರ್ ಪಾರ್ಟಿ’

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ‘ಕಾಂತಾರ ಚಿತ್ರಕ್ಕೆ ಅರವಿಂದ್. ಎಸ್‌. ಕಶ್ಯಪ್ ಛಾಯಾಗ್ರಹಣ ಇದೆ. ಅಜನೀಶ್ ಲೋಕನಾಥ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Advertisement

ಕಾಂತಾರ ಚಿತ್ರವು ದಸರಾ ಹಬ್ಬಕ್ಕೆ ಅಂದರೆ ಸೆ.30ರಂದು ಚಿತ್ರ ತೆರೆ ಕಾಣುತ್ತಿದೆ. ಚಿತ್ರದ ಸಿಂಗಾರ ಸಿರಿಯೇ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಅಜನೀಶ್ ಲೋಕನಾಥ್, ಪ್ರಮೋದ್ ಮರವಂತೆ ಸಾಹಿತ್ಯವಿರುವ ಹಾಡಿಗೆ ವಿಜಯ್ ಪ್ರಕಾಶ್, ಅನನ್ಯಾ ಭಟ್ ದನಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next