Advertisement

National Award; ಗೆದ್ದ ಬೆನ್ನಲ್ಲೇ ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸಿದೆ ಎಂದ ರಿಷಬ್

08:25 AM Aug 21, 2024 | Team Udayavani |

ಬೆಂಗಳೂರು: ‘ಕಾಂತಾರ'(Kantara) ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದು ಇದಕ್ಕೆ ಕಾರಣ ಹಿಂದಿ ಚಿತ್ರರಂಗದ (Bollywood) ಕುರಿತು ಅವರು ನೀಡಿರುವ ಹೇಳಿಕೆ.

Advertisement

ಪ್ರಮೋದ್ ಶೆಟ್ಟಿ ಅಭಿನಯದ ಮುಂಬರುವ ಕನ್ನಡ ಚಲನಚಿತ್ರ ‘ಲಾಫಿಂಗ್ ಬುದ್ಧ’ ಪ್ರಚಾರ ಮಾಡುತ್ತಿರುವ ವೇಳೆ MetroSaga ದಲ್ಲಿ ಸಂದರ್ಶನದಲ್ಲಿ ಮಾತನಾಡಿದ ರಿಷಬ್, ”ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತದ ಚಿತ್ರಣಕ್ಕಾಗಿ ಬಾಲಿವುಡ್ ಅನ್ನು ಟೀಕಿಸಿದ್ದಾರೆ.

ಸಂದರ್ಶನದ ಕ್ಲಿಪ್ ವೈರಲ್ ಆಗಿದ್ದು, ಕನ್ನಡದಲ್ಲೇ ಮಾತನಾಡಿದ ರಿಷಬ್ ಬಾಲಿವುಡ್ ಚಲನಚಿತ್ರಗಳು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಹೇಗೆ ನಕಾರಾತ್ಮಕವಾಗಿ ಚಿತ್ರಿಸುತ್ತವೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

“ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತವನ್ನು ಕೆಟ್ಟ ಬೆಳಕಿನಲ್ಲಿ ತೋರಿಸುತ್ತವೆ. ಈ ಕಲಾತ್ಮಕ ಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು ರೆಡ್ ಕಾರ್ಪೆಟ್ ನೀಡಲಾಗುತ್ತದೆ. ನನ್ನ ರಾಷ್ಟ್ರ, ನನ್ನ ರಾಜ್ಯ, ನನ್ನ ಭಾಷೆ ನನ್ನ ಹೆಮ್ಮೆ. ಜಾಗತಿಕವಾಗಿ ಧನಾತ್ಮಕ ಟಿಪ್ಪಣಿಯನ್ನು ಏಕೆ ಪಡೆ ದುಕೊಳ್ಳಬಾರದು ಮತ್ತು ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

Advertisement

ರಿಷಬ್ ಶೆಟ್ಟಿ ಸದ್ಯ ‘ಕಾಂತಾರ: ಚಾಪ್ಟರ್ 1’ (ಕಾಂತಾರ 2)(Kantara: Chapter 1) ಕೆಲಸದಲ್ಲಿ ನಿರತರಾಗಿದ್ದಾರೆ. ಬಹು ನಿರೀಕ್ಷಿತ ಚಿತ್ರವು 2025 ರ ಆರಂಭದಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next