Advertisement

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

09:30 AM Jun 25, 2024 | Team Udayavani |

ಬೆಂಗಳೂರು: ಡಾರ್ಲಿಂಗ್‌ ಪ್ರಭಾಸ್‌ ವೃತ್ತಿ ಬದುಕಿನ ಮತ್ತೊಂದು ದುಬಾರಿ ಸಿನಮಾವೆಂದೇ ಹೇಳಲಾಗುತ್ತಿರುವ  ʼಕಲ್ಕಿ 2898 ADʼ ರಿಲೀಸ್‌ ಡೇಟ್‌ ಸಮೀಪಿಸುತ್ತಿದ್ದಂತೆ ಪ್ರಚಾರವೂ ಜೋರಾಗಿ ನಡೆಯುತ್ತಿದೆ.

Advertisement

ಈಗಾಗಲೇ ತನ್ನ ಟೀಸರ್‌, ಟ್ರೇಲರ್‌ ನಿಂದ ಗಮನ ಸೆಳೆದಿರುವ ʼ ʼಕಲ್ಕಿ 2898 ADʼ ʼಬುಜ್ಜಿʼ ವಾಹನದಿಂದಲೂ ಸಖತ್‌ ಸೌಂಡ್‌ ಮಾಡಿದೆ. ಚಿತ್ರದಲ್ಲಿ ಭೈರವ (ಪ್ರಭಾಸ್‌) ಅವರ ವಾಹನ ಆಗಿರುವ ಬುಜ್ಜಿಯನ್ನು ಸದ್ಯ ಚಿತ್ರದ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ.

ಬುಜ್ಜಿಯನ್ನು ಸಿನಿಮಾದ ಪ್ರಚಾರಕ್ಕಾಗಿ ನಾನಾ ಕಡೆ ಬಳಲಾಗಿದೆ. ತಮಿಳುನಾಡು, ಆಂಧ್ರದ ಕಡೆಗಳಲ್ಲಿ ಬುಜ್ಜಿ  ರೌಂಡ್ಸ್‌ ಹಾಕಿದೆ.

ಚಿತ್ರಕ್ಕಾಗಿ ವಿಶೇಷವಾಗಿ ಡಿಸೈನ್‌ ಆಗಿರುವ ʼಬುಜ್ಜಿʼಯನ್ನು ಅಕ್ಕಿನೇನಿ ನಾಗಚೈತನ್ಯ, ಮಾಜಿ ಫಾರ್ಮುಲಾ ಒನ್ ರೇಸರ್ ನಾರಾಯಣ್ ಕಾರ್ತಿಕೇಯನ್, ಆನಂದ್ ಮಹೀಂದ್ರ ಸೇರಿದಂತೆ ಹಲವರು ಸವಾರಿ ಮಾಡಿದ್ದಾರೆ.

ಇದೀಗ ಕರ್ನಾಟಕಕ್ಕೂ ಬುಜ್ಜಿ ಬಂದಿದ್ದು, ನಟ – ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಊರಾದ ಕುಂದಾಪುರಕ್ಕೆ ಬಂದಿದೆ. ಖಾಲಿ ಮೈದಾನದಲ್ಲಿ ಬುಜ್ಜಿಯನ್ನೇರಿ ರಿಷಬ್‌ ಅದರ ಸವಾರಿಯನ್ನು ಮಾಡಿ ಥ್ರಿಲ್‌ ಆಗಿದ್ದಾರೆ.

Advertisement

“ಚಿತ್ರದ ಟೀಸರ್‌ ನೋಡಿಯೇ ಗೊತ್ತಾಯಿತು. ಬುಜ್ಜಿಯ ರೇಂಜ್‌ ಯಾವ ಮಟ್ಟಿಗೆ ಇದೆಯೆಂದು. ಬುಜ್ಜಿ ಸವಾರಿ ಮಾಡಿದ್ದು ಒಂದು ಅದ್ಭುತ ಅನುಭವ. ಆಲ್‌ ದಿ ಬೆಸ್ಟ್ ಭೈರವ ಅಂಡ್ ಬುಜ್ಜಿ. ಕಲ್ಕಿ ಜೂನ್ 27ಕ್ಕೆ ರಿಲೀಸ್ ಆಗುತ್ತೆ. ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ” ಎಂದು ರಿಷಬ್‌ ಹೇಳಿದ್ದಾರೆ.

ಬುಜ್ಜಿ ಸವಾರಿ ಮಾಡುವ ವಿಡಿಯೋವನ್ನು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ.

ಇತ್ತ ರಿಷಬ್‌ ಸದ್ಯ ʼಕಾಂತಾರ ಪ್ರೀಕ್ವೆಲ್‌ʼ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next