Advertisement

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

10:45 AM Jun 28, 2024 | Team Udayavani |

ಜೂನ್‌ ತಿಂಗಳಲ್ಲಿ ಒಂದಷ್ಟು ನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಿ, ಆ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಚಿತ್ರಗಳು ಮಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಜೊತೆಗೆ ಜೂನ್‌ ತುಂಬಾ ದರ್ಶನ್‌ ಪ್ರಕರಣದ್ದೇ ಸದ್ದು ಜೋರಾಗಿದ್ದರಿಂದ ಒಂದೊಳ್ಳೆಯ ಸಿನಿಮಾಕ್ಕೆ ಸಿಗಬೇಕಾದ ಪ್ರಚಾರ ಕೂಡಾ ಈ ಸಿನಿಮಾಗಳಿಗೆ ಸಿಗಲಿಲ್ಲ. ಮೀಡಿಯಾ, ಸೋಶಿಯಲ್‌ ಮೀಡಿಯಾ ಸೇರಿದಂತೆ ಎಲ್ಲವೂ ದರ್ಶನ್‌ ಪ್ರಕರಣವನ್ನೇ ಫೋಕಸ್‌ ಮಾಡಿದ ಪರಿಣಾಮ ಈ ಸಿನಿಮಾಗಳು ಔಟ್‌ಫೋಕಸ್‌ ಆಗಿದ್ದು ಸುಳ್ಳಲ್ಲ. ಇದೇ ಬೇಸರದೊಂದಿಗೆ ಜೂನ್‌ ತಿಂಗಳ “ಸಿನಿವಾರ’ ಮುಗಿದೇ ಹೋಗಿದೆ. ತಿಂಗಳಾಂತ್ಯದಲ್ಲಿ “ಕಲ್ಕಿ’ ಮಧ್ಯೆ ಬೇರ್ಯಾವ ಸಿನಿಮಾಗಳು ಸದ್ದು ಮಾಡಲಿಲ್ಲ.

Advertisement

ಈಗ ದೃಷ್ಟಿ ಜುಲೈನತ್ತ. ಜುಲೈನಲ್ಲಾದರೂ ಒಂದು ಬ್ರೇಕ್‌ ಸಿಗಲಿ ಎಂಬುದು ಸಿನಿಮಂದಿಯ ಪ್ರಾರ್ಥನೆ. ಅದಕ್ಕೆ ಕಾರಣ ಜುಲೈ ತಿಂಗಳ ತುಂಬಾ ಬಿಡುಗಡೆಯಾಗುತ್ತಿರುವುದು ಬಹುತೇಕ ಹೊಸಬರ ಸಿನಿಮಾ ಗಳು. ಪ್ರತಿ ವರ್ಷವೂ ಚಿತ್ರರಂಗವನ್ನು ಕಾಪಾಡುವುದು ಹೊಸಬರ ಸಿನಿಮಾಗಳೇ. ಸೋಲು- ಗೆಲುವು ಏನೇ ಇರ ಬಹುದು. ಆದರೆ, ಸತತವಾಗಿ ಸಿನಿಮಾಗಳು ಬಿಡುಗಡೆಯಾಗಿ, ಸಿನಿ ರಂಗವನ್ನು ಚಟುವಟಿಕೆಯ ಲ್ಲಿಡುತ್ತವೆ.

ಈಗ ಜುಲೈ ಪೂರ್ತಿ ಹೊಸಬರ ಸಿನಿಮಾಗಳು ಬಿಡುಗಡೆಯಾಗಲಿದ್ದು, ಸರತಿಯಲ್ಲಿ ನಿಂತಿವೆ. ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳು ಜುಲೈನಲ್ಲಿ ತೆರೆಕಾಣಲಿವೆ. ಈ  ಮೂಲಕ ಹೊಸಬರು ಹೊಸ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ.  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈನಲ್ಲಿ ಒಂದಷ್ಟು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಬೇಕಿತ್ತು.

ಆದರೆ, ಈ ಸಿನಿಮಾಗಳೆಲ್ಲವೂ ಆಗಸ್ಟ್‌ಗೆ ಶಿಫ್ಟ್ ಆದ ಕಾರಣ ಜುಲೈ ತುಂಬಾ ಹೊಸಬರ ಕ್ಯೂ ಆರಂಭವಾಗಿದೆ. ಅದಕ್ಕೆ ಕಾರಣ “ಪುಷ್ಪ’. ಅಲ್ಲು ಅರ್ಜುನ್‌ ನಟನೆಯ “ಪುಷ್ಪ’ ಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗುವುದಾಗಿ ಘೋಷಿಸಿತ್ತು. ಆದರೆ, “ಪುಷ್ಪ’ ರಿಲೀಸ್‌ ಮುಂದಕ್ಕೆ ಹಾಕುವ ಮೂಲಕ ಕನ್ನಡದ ಸ್ಟಾರ್‌ ಸಿನಿಮಾಗಳು ಆಗಸ್ಟ್‌ಗೆ ಬರುವ ನಿರ್ಧಾರ ಮಾಡಿದವು. ಈ ಕಾರಣದಿಂದ ಜುಲೈನಲ್ಲಿ ಹೊಸಬರ “ಮೆರವಣಿಗೆ’ ಹೊರಡಲು ಅಣಿಯಾಗಿದ್ದಾರೆ.

ಗೆಲುವಿನ ನಿರೀಕ್ಷೆ

Advertisement

ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಬಿಝಿನೆಸ್‌ ಮಾಡಿ ಕೊಂಡು ತಕ್ಕಮಟ್ಟಿಗೆ ಸೇಫ್ ಆಗಿರುತ್ತವೆ. ಆದರೆ, ಯಾವುದೇ ಬಿಝಿನೆಸ್‌ ಆಗದೇ ಪ್ರೇಕ್ಷಕ ಪ್ರಭುಗಳನ್ನೇ ನಂಬಿಕೊಂಡು ಬರುವವರು ಹೊಸಬರು. ಇದೇ ಕಾರಣದಿಂದ ಹೊಸಬರ ಚಿತ್ರಗಳು ಗೆಲ್ಲಬೇಕು. ಇಲ್ಲಿ ಹೊಸಬರ ಒಂದು ಚಿತ್ರ ಗೆದ್ದರೆ ಅದು ಮುಂದೆ ಬರಲಿರುವ 10 ಚಿತ್ರಗಳಿಗೆ ಧೈರ್ಯ ತುಂಬುತ್ತವೆ. ಒಂದು ವೇಳೆ ಯಾವ ಸಿನಿಮಾವೂ ಚಿತ್ರಮಂದಿ ರದಲ್ಲಿ ನಿಲ್ಲದೇ ಹೋದರೆ ಅಲ್ಲಿಗೆ ಹೊಸಬರ ಶ್ರಮದ ಜೊತೆಗೆ ಕನಸು ನುಚ್ಚುನೂರಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಬರು ರಿಲೀಸ್‌ ವಿಚಾರದಲ್ಲಿ ಎಚ್ಚರದ ಹೆಜ್ಜೆ ಇಡಬೇಕಾಗುತ್ತದೆ

ಜುಲೈನಲ್ಲಿ ತೆರೆಕಾಣಲಿರುವ ಚಿತ್ರಗಳು

ಹಿರಣ್ಯ

ಬಿಸಿ ಬಿಸಿ ಐಸ್‌ಕ್ರೀಂ

ಕಾಗದ

ಬ್ಯಾಕ್‌ ಬೆಂಚರ್ಸ್‌

ವಿದ್ಯಾರ್ಥಿ ವಿದ್ಯಾರ್ಥಿನಿಯರೇ

ಕೆಂಡ

ಸಾಂಕೇತ್‌

ನಾಟ್‌ಔಟ್‌

ಡಿಟೆಕ್ಟಿವ್‌ ತೀಕ್ಷ್ಣ

ಟೆಡ್ಡಿಬೇರ್‌

ಸಮಯ

ಕಾದಾಡಿ

ಜಾಸ್ತಿ ಪ್ರೀತಿ

ಶರಣರ ಶಕ್ತಿ

ಮಾನ್‌ಸ್ಟರ್‌

ಜಿಗರ್‌

ವಿಕಾಸ ಪರ್ವ

ನಸಾಬ್‌

ದಾಸಪ್ಪ

ಬ್ರಹ್ಮರಾಕ್ಷಸ

ಹೆಜ್ಜಾರು

 

 

ರವಿಪ್ರಕಾಶ್ರೈ

Advertisement

Udayavani is now on Telegram. Click here to join our channel and stay updated with the latest news.

Next