Advertisement

ಪಂತ್‌ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್‌!

07:42 AM Nov 12, 2020 | keerthan |

ಹೊಸದಿಲ್ಲಿ: ಈ ಬಾರಿ ಐಪಿಎಲ್‌ ಲೀಗ್‌ ವೇಳೆ ಸಂಪೂರ್ಣ ವೈಫ‌ಲ್ಯ ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ ರಿಷಭ್‌ ಪಂತ್‌, ಕಡೆಗೂ ಫೈನಲ್‌ನಲ್ಲಿ ಅರ್ಧ ಶತಕವೊಂದನ್ನು

Advertisement

ಬಾರಿಸಿದ್ದರು. ತಮ್ಮ ನೈಜ ಬ್ಯಾಟಿಂಗನ್ನು ಇಲ್ಲಿ ಪ್ರದರ್ಶಿಸಿದ್ದರು. ಅಷ್ಟರಲ್ಲಾಗಲೇ ಸಾಮಾಜಿಕ ತಾಣಗಳಲ್ಲಿ ಪಂತ್‌ ವಿರುದ್ಧ ಬಹಳ ಅಣಕಗಳು ಕೇಳಿ ಬಂದಿದ್ದವು. ಅದನ್ನೆಲ್ಲ ಈಗ ಅಳಿಸಲಾಗುತ್ತಿದೆಯಂತೆ!

ಫೈನಲ್‌ನಲ್ಲಿ ಡೆಲ್ಲಿ ತಂಡ 22 ರನ್‌ಗೆ 3 ವಿಕೆಟ್‌ ಕಳೆದು ಕೊಂಡಾಗ ಮೈದಾನಕ್ಕಿಳಿದ ರಿಷಭ್‌ ಪಂತ್‌ ಉತ್ತಮವಾಗಿ ಬ್ಯಾಟ್‌ ಮಾಡಿ ನಾಯಕನಿಗೆ ಬೆಂಬಲ ನೀಡಿದ್ದರು. ತಂಡದ ಕುಸಿತವನ್ನು ತಡೆದಿದ್ದರು. ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಫೈನಲ್ ಪಂದ್ಯದ ಎಕ್ಸ್ಟ್ರಾ ಇನ್ನಿಂಗ್ಸ್

* ಮುಂಬೈ 5ನೇ ಸಲ ಐಪಿಎಲ್‌ ಚಾಂಪಿಯನ್‌ ಆಯಿತು. ಇದು ಟಿ20 ಲೀಗ್‌ನ ದ್ವಿತೀಯ ಅತ್ಯುತ್ತಮ ಸಾಧನೆಯಾಗಿದೆ. ಸಿಯಾಲ್‌ಕೋಟ್‌ ಸ್ಟಾಲಿನ್ಸ್‌ (ಪಾಕಿಸ್ಥಾನ್‌ ನ್ಯಾಶನಲ್‌ ಟಿ20 ಕಪ್‌) ಮತ್ತು ಟೈಟಾನ್ಸ್‌ (ದಕ್ಷಿಣ ಆಫ್ರಿಕಾ ದೇಶಿ ಟಿ20 ಸರಣಿ) 6 ಸಲ ಚಾಂಪಿಯನ್‌ ಆಗಿರುವುದು ದಾಖಲೆ.

Advertisement

* ಮುಂಬೈ ಲೀಗ್‌ ಹಂತದ ಅಗ್ರಸ್ಥಾನಿಯಾಗಿ ಅತ್ಯಧಿಕ 3ನೇ ಸಲ ಚಾಂಪಿಯನ್‌ ಆಯಿತು. ಉಳಿದಂತೆ 2008ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.

* ಮುಂಬೈ ಅತೀ ಕಡಿಮೆ 15 ಆಟಗಾರರನ್ನಷ್ಟೇ ಆಡಿಸಿ ಚಾಂಪಿಯನ್‌ ಆದ ಮೊದಲ ತಂಡವಾಗಿದೆ.

* ಈ ಋತುವಿನಲ್ಲಿ ಡೆಲ್ಲಿ ವಿರುದ್ಧ ಆಡಿದ ಎಲ್ಲ 4 ಪಂದ್ಯಗಳನ್ನೂ ಮುಂಬೈ ಗೆದ್ದಿತು. ಇದರೊಂದಿಗೆ ಐಪಿಎಲ್‌ ಸೀಸನ್‌ ಒಂದರಲ್ಲಿ ಮುಂಬೈ ನಿರ್ದಿಷ್ಟ ಎದುರಾಳಿ ವಿರುದ್ಧ 2ನೇ ಸಲ ಅತೀ ಹೆಚ್ಚು 4 ಪಂದ್ಯಗಳನ್ನು ಜಯಿಸಿತು. ಕಳೆದ ವರ್ಷ ಚೆನ್ನೈ ವಿರುದ್ಧವೂ ಮುಂಬೈ ಇದೇ ಸಾಧನೆಗೈದಿತ್ತು. 2018ರಲ್ಲಿ ಸನ್‌ರೈಸರ್ ವಿರುದ್ಧ ಚೆನ್ನೈಕೂಡ 4 ಪಂದ್ಯ ಗೆದ್ದಿತ್ತು.

* ಟ್ರೆಂಟ್‌ ಬೌಲ್ಟ್ ಐಪಿಎಲ್‌ ಫೈನಲ್‌ನಲ್ಲಿ ಪಂದ್ಯಶ್ರೇಷ್ಠನೆನಿಸಿದ 4ನೇ ವಿದೇಶಿ ಕ್ರಿಕೆಟಿಗ. ಉಳಿದವರೆಂದರೆ ಪೊಲಾರ್ಡ್‌ (2013), ಬೆನ್‌ ಕಟ್ಟಿಂಗ್‌ (2016) ಮತ್ತು ವಾಟ್ಸನ್‌ (2018).

* ಶ್ರೇಯಸ್‌ ಅಯ್ಯರ್‌ ಐಪಿಎಲ್‌ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕನೆನಿಸಿದರು (25 ವರ್ಷ, 340 ದಿನ). ಹಿಂದಿನ ದಾಖಲೆ ರೋಹಿತ್‌ ಶರ್ಮ ಹೆಸರಲ್ಲಿತ್ತು (26 ವರ್ಷ, 26 ದಿನ).

* ಕ್ವಿಂಟನ್‌ ಡಿ ಕಾಕ್‌ 200 ಟಿ20 ಪಂದ್ಯಗಳನ್ನಾಡಿ ದರು. ಜತೆಗೆ 6 ಸಾವಿರ ರನ್‌ ಪೂರ್ತಿಗೊಳಿಸಿದರು.

* ಕಾಗಿಸೊ ರಬಾಡ ಐಪಿಎಲ್‌ ಕೂಟವೊಂದರಲ್ಲಿ 30 ವಿಕೆಟ್‌ ಉರುಳಿಸಿ ದ್ವಿತೀಯ ಸ್ಥಾನಿಯಾದರು. ಡ್ವೇನ್‌ ಬ್ರಾವೊ ಅಗ್ರಸ್ಥಾನದಲ್ಲಿದ್ದಾರೆ (32).

* ಇಶಾನ್‌ ಕಿಶನ್‌ ಐಪಿಎಲ್‌ ಋತುವೊಂದರಲ್ಲಿ 30 ಸಿಕ್ಸರ್‌ ಸಿಡಿಸಿದರು. ಇದು ಮುಂಬೈ ಕ್ರಿಕೆಟಿಗನ 2ನೇ ಅತ್ಯುತ್ತಮ ಸಾಧನೆ. 2008ರ ಉದ್ಘಾಟನಾ ಋತುವಿನಲ್ಲಿ ಸನತ್‌ ಜಯಸೂರ್ಯ 31 ಸಿಕ್ಸರ್‌ ಬಾರಿಸಿದ್ದು ದಾಖಲೆ.

* ಡೆಲ್ಲಿ ವಿರುದ್ಧ ಗೆಲುವಿನ ರನ್‌ ಬಾರಿಸುವ ಮೂಲಕ ಕೃಣಾಲ್‌ ಪಾಂಡ್ಯ ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಮುಂಬೈ ಪರ ಸಾವಿರ ರನ್‌ ಬಾರಿಸಿದ 9ನೇ ಕ್ರಿಕೆಟಿಗ.

Advertisement

Udayavani is now on Telegram. Click here to join our channel and stay updated with the latest news.

Next