ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಟ್ವೀಟರ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮುಂದುವರಿಸಿದ್ದು, ಪತ್ರವೊಂದನ್ನು ಲಗತ್ತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಕೇಂದ್ರದ ಎನ್‌ಡಿಎ ಸರ್ಕಾರ ಕೇಂದ್ರ ನಾಗರಿಕ ಸೇವೆಗಳಲ್ಲಿ ಬಲಪಂಥೀಯ ಧೋರಣೆ ಉಳ್ಳ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಈ ಪತ್ರ ಇದನ್ನು ಬಹಿರಂಗ ಪಡಿಸುತ್ತದೆ ಎಂದು ಬರೆದಿದ್ದಾರೆ.
ಟ್ವೀಟ್‌ನಲ್ಲಿ ”ಎದ್ದೇಳಿ ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಅಪಾಯದಲ್ಲಿದೆ.ಯಾವುದು ನಿಮ್ಮದಾಗಬೇಕೋ ಅದನ್ನು ಆರ್‌ಎಸ್‌ಎಸ್ ಪಡೆಯಲು ಯತ್ನಿಸುತ್ತಿದೆ. ಈ ಪತ್ರ ಕೇಂದ್ರ ನಾಗರಿಕ ಸೇವೆಗಳಲ್ಲಿ ಪರೀಕ್ಷಾ ಶ್ರೇಯಾಂಕ, ಅರ್ಹತೆಯ ಪಟ್ಟಿ, ನಿರ್ವಹಣೆಯ ಬದಲಾಗಿ ವ್ಯಕ್ತಿನಿಷ್ಠ ಮಾನದಂಡವನ್ನು ಬಳಸಿಕೊಂಡು
ಆರ್‌ಎಸ್‌ಎಸ್ ಆಯ್ಕೆ ಮಾಡಿದವರನ್ನು ಬಳಸಿಕೊಳ್ಳುವ ಪ್ರಧಾನಿಗಳ ಯೋಜನೆಯನ್ನು ಸ್ಪಷ್ಟಪಡಿಸುತ್ತದೆ”ಎಂದು ಬರೆದಿದ್ದಾರೆ.