Advertisement

ಬಿರುಕು ಬಿಟ್ಟ ಕೆರೆಗಳ ಏರಿ: ಕಳಪೆ ಕಾಮಗಾರಿ ಆರೋಪ

07:23 AM Jun 15, 2020 | Lakshmi GovindaRaj |

ದೇವನಹಳ್ಳಿ : ತಾಲೂಕಿನ ಕೆರೆಗಳ ಏರಿ ಬಿರುಕು ಬಿಟ್ಟಿದೆ. ಕೆರೆಗಳ ಕಳಪೆ ಕಾಮಗಾರಿಗೆ ಇದು ಸಾಕ್ಷಿ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆರೆಗಳಿಗೆ ಎನ್‌.ಎಚ್‌ ವ್ಯಾಲಿ ಯೋಜನೆ ಅಡಿ ನೀರು ಹರಿಯುತ್ತಿದೆ. ದುರಸ್ತಿ ಮಾಡಿರುವ ಕೆರೆಗಳ ಏರಿ ಬಿರುಕು ಬಿಟ್ಟು ಕಾಮಗಾರಿ ಕಳಪೆ ಆಗಿರುವುದು ಕಂಡು ಬಂದಿದೆ.

Advertisement

ಹತ್ತಾರು ದಶಕಗಳಿಂದ ಕೆರೆಗಳಲ್ಲಿ ನೀರು ತುಂಬಿ ಕೋಡಿ ಹರಿಯುವುದು ಯಾವಾಗ ಎಂದು ಸ್ಥಳೀಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಕಳೆದ 25 ವರ್ಷಗಳಿಂದ ಕೆರೆಗಳಿಗೆ ಮಳೆ ನೀರು ಹರಿದು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಕೈಗೊಂಡ ಯೋಜನೆಯಲ್ಲಿ ಶೇ.50 ರಷ್ಟು ಗುಣ ಮಟ್ಟ ಕಾಯ್ದುಕೊಂಡಿದ್ದರೆ ಸಾಕಾಗಿತ್ತು. ಆದರೆ, ಆ ಕೆಲಸ ಆಗಿಲ್ಲ.

ಇಲ್ಲಿನ ನಡೆದಿರುವ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಎತ್ತಿನ ಹೊಳೆ ಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆರೆಗಳಿಗೆ ಹೆಬ್ಟಾಳ,  ನಾಗವಾರ ಕೆರೆಯ ತ್ಯಾಜ್ಯದ ನೀರು ಸಂಸ್ಕರಿಸಿ ಹರಿಸುವ ಯೋಜನೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿತ್ತು. ಅದಕ್ಕೆ ಪೂರಕವಾಗಿ ಮಾಳಿಗೇನ ಹಳ್ಳಿ ಕೆರೆಯಲ್ಲಿ ನಡೆದಿರುವ ಕೋಡಿ ದುರಸ್ತಿ, ಕೆರೆ ಅಂಗಳದಲ್ಲಿನ ರಸ್ತೆ  ನಿರ್ಮಾಣದ ಮಾರ್ಗ ಅವೈಜ್ಞಾನಿಕ ವಾಗಿದೆ. ಕೆರೆಗೆ ಮಳೆ ನೀರು ಹರಿಯದಂತೆ ಮಣ್ಣು ಹಾಕಲಾಗಿದೆ.

ಪೂರ್ವ ದಿಕ್ಕಿನಲ್ಲಿ ಒಂದೂವರೆ ಅಡಿ ಸುತ್ತಳತೆಯ ಪೈಪ್‌ಲೈನ್‌ ಮೂಲಕ ಸದ್ಯ ನೀರು ಬಿಡಲಾಗುತ್ತಿದೆ. ಜೋರಾಗಿ ಮಳೆ ಸುರಿದರೆ ಕೆರೆ  ಬದಿಯಲ್ಲಿ ನಿರ್ಮಾಣ ಮಾಡಿರುವ ರಸ್ತೆ ಕೊಚ್ಚಿ ಹೋಗಲಿದೆ. ಅಲ್ಲದೇ ಮಳೆ ರೈತರ ಬೆಳೆಯನ್ನೂ ನಾಶಗೊಳಿಸುವ ಸಾಧ್ಯತೆ ಇದೆ ಎಂಬುದು ರೈತರ ಆತಂಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next