Advertisement
ಈ ವರ್ಷಾರಂಭದಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ವಾಹನ ಖರೀದಿಯತ್ತ ಬೀರಿ ಎಪ್ರಿಲ್, ಮೇ, ಜೂನ್‌ನಲ್ಲಿ ವಹಿವಾಟು ಕುಂಠಿತಗೊಂಡಿತ್ತು. ಜುಲೈಯಿಂದ ಮತ್ತೆ ಚೇತರಿಕೆಯತ್ತ ಸಾಗಿದ್ದು, ಅಕ್ಟೋಬರ್ ಆರಂಭದಲ್ಲಿ ನವರಾತ್ರಿ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ವಾಹನ ಖರೀದಿ ತುಸು ಏರಿಕೆ ಕಂಡಿತ್ತು. ಇದೀಗ ಪ್ರತೀ ದಿನ 250ಕ್ಕೂ ಹೆಚ್ಚು ನೋಂದಣಿಯಾಗುತ್ತಿವೆ.
Related Articles
Advertisement
ಕರಾವಳಿಯಲ್ಲಿ ಕಳೆದ ಎರಡು ವಾರಗಳಲ್ಲಿ ಖರೀದಿಯ ವಿವರ:
ಆರ್‌ಟಿಒ ಬೈಕ್ ಕಾರು
ಮಂಗಳೂರು 2,005 517
ಬಂಟ್ವಾಳ 153 37
ಪುತ್ತೂರು 413 83
ಉಡುಪಿ 1,027 252
ನವೆಂಬರ್ನಲ್ಲಿ ನೋಂದಣಿ
ಆರ್ಟಿಒ ವಾಹನ ಖರೀದಿ
ಮಂಗಳೂರು 2,675
ಪುತ್ತೂರು 573
ಬಂಟ್ವಾಳ 287
ಉಡುಪಿ 1,426
ಒಟ್ಟು 4,961
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ವಾಹನ ನೋಂದಣಿ ಏರಿಕೆಯಾಗುತ್ತಿದೆ. ಈ ಹಿಂದೆ ಕೊರೊನಾ ಕಾರಣ ಆಟೋಮೊಬೈಲ್ ಕ್ಷೇತ್ರದತ್ತ ಗ್ರಾಹಕರು ಅಷ್ಟೊಂದು ಆಸಕ್ತಿ ತೋರುತ್ತಿರಲಿಲ್ಲ. ಕೊರೊನಾ ಕಡಿಮೆಯಾಗು ತ್ತಿದ್ದಂತೆ ಖರೀದಿ ಚೇತರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಆರ್. ವರ್ಣೇಕರ್, ಮಂಗಳೂರು ಆರ್ಟಿಒ
–ನವೀನ್ ಭಟ್ ಇಳಂತಿಲ