Advertisement

ರಿಯೋ ಓಪನ್‌ ಟೆನಿಸ್‌: ಥೀಮ್‌, ಸೆಶಿನಾಟೊ ಪರಾಭವ

12:40 AM Feb 21, 2019 | |

ರಿಯೊ ಡಿ ಜನೈರೊ: ಆಸ್ಟ್ರಿಯಾದ ಅಗ್ರ ಶ್ರೇಯಾಂಕಿತ ಡೊಮಿನಿಕ್‌ ಥೀಮ್‌ ಮತ್ತು “ಆರ್ಜೆಂಟೀನಾ ಓಪನ್‌’ ಚಾಂಪಿಯನ್‌ ಮಾರ್ಕೊ ಸೆಶಿನಾಟೊ “ರಿಯೋ ಓಪನ್‌’ ಟೆನಿಸ್‌ ಕೂಟದ ಮೊದಲ ಪಂದ್ಯದಲ್ಲಿಯೇ ಸೋಲುನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

Advertisement

ಡೊಮಿನಿಕ್‌ ಥೀಮ್‌ ಸರ್ಬಿಯಾದ ಲಾಸ್ಲೊ ಡಿಜೆ ವಿರುದ್ಧ 3-6, 3-6 ಸೆಟ್‌ಗಳಿಂದ ಸೋತರು. ಇನ್ನೊಂದು ಪಂದ್ಯದಲ್ಲಿ ಇಟಲಿಯ ಮಾರ್ಕೊ ಸೆಶಿನಾಟೊ ಸ್ಲೊವೇನಿಯಾದ ಅಲ್ಜಾಜ್‌ ಬೆಡೆನ್‌ ವಿರುದ್ಧ 5-7, 6-7 (1-7) ಸೆಟ್‌ಗಳಿಂದ ಪರಾಭವಗೊಂಡರು. ಕಳೆದ ವಾರ ಮುಕ್ತಾಯಗೊಂಡ “ಆರ್ಜೆಂಟೀನಾ ಓಪನ್‌’ ಟೂರ್ನಿಯಲ್ಲಿ ಸೆಶಿನಾಟೊ ಚಾಂಪಿಯನ್‌ ಆಗಿದ್ದರು.

ಕೆನಡಾದ ಫೆಲಿಕ್ಸ್‌ ಯುಗರ್‌ ಅಲಿಯಾಸ್ಸಿಮ್‌ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 6-2, 6-3 ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಮಾಜಿ ಚಾಂಪಿಯನ್‌ ಡೀಗೊ ಶಾರ್ಟ್ಸ್ಮನ್‌ ಮತ್ತು ಉರುಗ್ವೆಯ ಪಾಬ್ಲೊ ಕ್ಯುವಾಸ್‌ ನಡುವಿನ ಪಂದ್ಯ ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next