Advertisement
ಕುಂದಾಪುರ ನಗರ:ರಿಂಗ್ ರಸ್ತೆ
Related Articles
Advertisement
ಕೋಡಿ ಭಾಗದಲ್ಲಿ ಸೀವಾಕ್ ನಿರ್ಮಾಣವಾಗಿದೆ. ಪ್ರವಾಸೋದ್ಯಮಕ್ಕೆ ನೀಲಿ ನಕ್ಷೆ ತಯಾರಾಗಿದೆ. ಈಚೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಕುಂದಾಪುರದ ಮುಕುಟ ಮಣಿ ಕೋಡಿ. ಹೊರ ಜಿಲ್ಲೆಯಿಂದ ಬರುವ ಅನೇಕರು ಕಡಲ ತೀರ ನೋಡಲು ಬರುವುದು ಕೋಡಿಗೆ. ಆದರೆ ಅಲ್ಲಿನ ಸ್ಥಿತಿ ನೋಡಿದರೆ ಬೇಸರ ಆಗುತ್ತದೆ. ಸರಕಾರ ಹಾಗೂ ಪುರಸಭೆ ಗಮನ ನೀಡಿದರೆ ಮಲ್ಪೆ ಕಡಲ ತೀರದ ಮಾದರಿಯಲ್ಲಿ ಕೋಡಿ ಕಡಲತೀರ ಕಂಗೊಳಿಸುವುದರಲ್ಲಿ ಸಂಶಯವಿಲ್ಲ.
ಉಪ್ಪು ನೀರಿನ ಸಮಸ್ಯೆ
ಈ ಪರಿಸರದಲ್ಲಿ ಅದೆಷ್ಟೋ ವರ್ಷದಿಂದ ಹೊಳೆಯ ಉಪ್ಪು ನೀರು ಊರಿನ ಅರ್ಧ ಭಾಗದಷ್ಟು ಭೂಮಿಯನ್ನೇ ನಾಶ ಮಾಡಿದೆ. ಕೋಡಿ ಗದ್ದೆಯಲ್ಲಿ ನೀರು ಸೇರಿ ಕೊಳೆತು ನಾರುವ ವಾಸನೆಯ ಜತೆಗೆ ಹಗಲು ರಾತ್ರಿ ಎನ್ನದೆ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಇಲ್ಲಿಯ ವ್ಯವಸ್ಥೆ ಕೇಳುವವರೇ ಇಲ್ಲ. ಗ್ರಾಮಸ್ಥರ ಯಾವ ಮನವಿಗೂ ಪುರಸಭೆ ಸ್ಪಂದಿಸಲೇ ಇಲ್ಲ ಎನ್ನುತ್ತಾರೆ ಶರತ್ ಶೇರೆಗಾರ್. ಕುಂದಾಪುರಕ್ಕೆ ಕೋಡಿ ಅನತಿ ದೂರ ಇರುವುದಿಂದಲೋ ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಇದೆಯೋ ಇಲ್ಲವೋ ಎಂಬ ಭಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇದ್ದಿರಬಹುದು ಎನ್ನುತ್ತಾರೆ ಕೋಡಿ ಅಶೋಕ್ ಪೂಜಾರಿ.
ಕುಂದಾಪುರ ಮೆಸ್ಕಾಂ ಗ್ರಾ. ಪಂ. ಲೆಕ್ಕದಲ್ಲಿ ಕೋಡಿ ಭಾಗದ ವಿದ್ಯುತ್ ಬಿಲ್ ಸಂಗ್ರಹಿಸಿ ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಇರುವುದರಿಂದ ಹಳೆ ಬಾಕಿಯನ್ನೂ ನೀಡಬೇಕೆಂದು ನೋಟಿಸ್ ನೀಡಿತ್ತು. ಕೋಡಿ ಪುರಸಭೆ ವ್ಯಾಪ್ತಿಗೆ ಸೇರಿದೆ ಎಂದು ಜನಸಾಮಾನ್ಯರಿಗೆ ವಿದ್ಯುತ್ ಬಿಲ್ ಕೂಡ ಹೆಚ್ಚುವರಿ ಪಡೆಯಲಾಗುತ್ತಿದೆ. ಆದರೆ ಪುರಸಭೆಯಿಂದ ಸೌಲಭ್ಯದ ವಿಷಯ ಬಂದಾಗ ಕೋಡಿಯನ್ನು ಮೀಸಲಿಡಲಾಗುತ್ತದೆ ಎನ್ನುವುದು ಈ ಭಾಗದ ಜನರ ಅಳಲು.
16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆ ಈಗ ಮಂಜೂರಾದ ಮೊತ್ತದಲ್ಲಿ ಪ್ರಭಾಕರ ಟೈಲ್ಸ್ ವರೆಗೆ ಈ ಕಾಮಗಾರಿ ನಡೆಯಲಿದ್ದು ಮುಂದಿನ ಕಾಮಗಾರಿಗೆ 16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಹರ್ಷವರ್ಧನ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್
ರಿಂಗ್ ರಸ್ತೆಯೇ ಪರಿಹಾರಇಲ್ಲಿನ ಸಮಸ್ಯೆ ನಿವಾರಣೆಗೆ ಪರಿಹಾರ ರಿಂಗ್ ರಸ್ತೆ ಎನ್ನುತ್ತಾರೆ ಈ ಭಾಗದ ಜನ. ಕೋಡಿ ಸೇತುವೆ ಬಳಿಯ ಜಟ್ಟಿಗೇಶ್ವರ ದೇವಸ್ಥಾನ ಎದುರಿನಿಂದ ಸೀವಾಕ್ ಬಳಿಯ ಮೀನುಗಾರಿಕಾ ಬೋಟ್ ನಿಲ್ಲುವ ಜೆಟ್ಟಿಯ ತನಕ ಕೇವಲ 500 ಮೀಟರ್ ಆಸುಪಾಸಿನ ಅಂತರದ ರಿಂಗ್ ರಸ್ತೆನಿರ್ಮಿಸಬೇಕು. ನಗರದ ರಿಂಗ್ ರಸ್ತೆಗೆ ರೂ. 20 ಕೋಟಿ ಅನುದಾನ ಮಂಜೂರು ಆಗಿರುವಾಗ ಈ ಸಣ್ಣ ಕಾಮಗಾರಿಗೆ 2-3 ಕೋಟಿ ರೂ. ಅನುದಾನ ತರುವುದು ಶಾಸಕರಿಗೆ ಕಷ್ಟವಲ್ಲ. ಕೋಡಿ ಸೇತುವೆ ಬಳಿಯಿಂದ ಸೀವಾಕ್ ಗೆ ಈ ನೇರ ರಸ್ತೆ ಬಹಳಷ್ಟು ಉಪಕಾರವಾಗಲಿದೆ. ಈಗಾಗಲೇ ಶಿವಾಲಯ ಮೂಲಕ ಇಕ್ಕಟ್ಟಾದ ರಸ್ತೆಯಲ್ಲಿ ವಾರಾಂತ್ಯದಲ್ಲಿರಜಾದಿನಗಳಲ್ಲಿ ಸಂಜೆಯ ಹೊತ್ತು ಬಹಳಷ್ಟು ಟ್ರಾಫಿಕ್ ಜಾಮ್ ಆಗುತ್ತಿದೆ. ಸುತ್ತು ಬಳಸಿ ಸಾಗುವ ಸುಮಾರು 1.5 ಕಿ.ಮೀ. ಉಳಿಯುತ್ತದೆ. ಶಾಸಕರು ಆದ್ಯತೆಯ ಮೇರೆಗೆ ಈ ಕಾಮಗಾರಿಗೆ ಮಂಜೂರಾತಿ ಒದಗಿಸಿದಲ್ಲಿ ಪ್ರವಾಸಿಗರಿಗೆ, ವಿಹಾರಾರ್ಥಿಗಳಿಗೆ ಅನುಕೂಲವಾಗಲಿದೆ. ಶಿವಾಲಯದ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿ ಕೂಡ ತಪ್ಪಲಿದೆ. _ಲಕ್ಷ್ಮೀ ಮಚ್ಚಿನ