Advertisement

ಕಂಕಣ ಸೂರ್ಯಗ್ರಹಣ: ನಾಡಿನೆಲ್ಲೆಡೆ ಪೂಜೆ- ಹೋಮ; ಜನ ಸಂಚಾರ ವಿರಳ

09:59 AM Dec 27, 2019 | keerthan |

ಮಣಿಪಾಲ: ಬಲು ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ನಡೆಯುತ್ತಿದೆ. ಕರ್ನಾಟಕದಲ್ಲಿ ಬೆಳಿಗ್ಗೆ 8.04ರಲ್ಲಿ ಆರಂಭವಾದ ಗ್ರಹಣ 11.03ರ ಸಮಯಕ್ಕೆ ಅಂತ್ಯವಾಗಲಿದೆ.

Advertisement

ಕಂಕಣ ಸೂರ್ಯಗ್ರಹಣದ ಸಮಯದಲ್ಲಿ ನಾಡಿನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ಹೋಮ ಹವನಗಳು ನಡೆದವು. ಶ್ರಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ನಡೆಯಿತು. ಗೃಹಣ ಆರಂಭದಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯುತ್ತದೆ.

ಉಳ್ಳಾಲ ಕಾಪಿಕಾಡಿನ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಅಂಗವಾಗಿ ಗ್ರಹಣದೋಷ ನಿವಾರಣೆಗೆ ವಿಶೇಷ ಹೋಮ ನಡೆಯಿತು.

ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಅರ್ಚಕ ವೇ. ಮೂ. ಚಕ್ರಪಾಣಿ ಉಡುಪ ಅವರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಗ್ರಹಣ ಶಾಂತಿ ಹೋಮ ನಡೆಯಿತು.

Advertisement

ರಾಜ್ಯದೆಲ್ಲಡೆ ಕಂಕಣ ಸೂರ್ಯಗ್ರಹಣ ವೀಕ್ಷಿಸಲಾಯಿತು. ತಾರಾಲಯಗಳಲ್ಲಿ ಹಲವರು ವೀಕ್ಷಿಸಿದರು. ಹಲವರು ಇತರ ಸುರಕ್ಷಿತ ವ್ಯವಸ್ಥೆಗಳೊಂದಿಗೆ ಈ ವರ್ಷದ ಕೊನೆಯ ಸೂರ್ಯಗ್ರಹಣ ವೀಕ್ಷಿಸಿದರು.

ಜನ ಸಂಚಾರ ವಿರಳ

ಸೂರ್ಯ ಗ್ರಹಣದ ಕಾರಣದಿಂದ ಇಂದು ಜನಸಂಚಾರ ವಿರಳವಾಗಿತ್ತು. ಜನರು ಮನೆಯಲ್ಲಿಯೆ ಉಳಿದು ಟಿವಿ ವಾಹಿನಿಯ ನೇರಪ್ರಸಾರಗಳಲ್ಲಿ ಗ್ರಹಣ ವೀಕ್ಷಿಸಿದರು. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ಮಂಗಳೂರಿನ ಪ್ರಮುಖ ನಂತೂರು ವೃತ್ತ ಖಾಲಿ ಖಾಲಿಯಾಗಿತ್ತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಭಾಶಿ ಇಲ್ಲಿನ‌ ವಿದ್ಯಾರ್ಥಿಗಳು ತಮ್ಮ‌ಶಿಕ್ಷಕರು, ಸ್ಥಳೀಯರು, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಮೌಡ್ಯದಿಂದ ಹೊರಬಂದು ಕಂಕಣ ಸೂರ್ಯಗ್ರಹಣವನ್ನು ತಮ್ಮ ಶಿಕ್ಷಕರ ಸಕಲ ತಯಾರಿಯೊಂದಿಗೆ ವೀಕ್ಷಿಸಿ ಸಂತಸವನ್ನು ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next