ಸಿಡ್ನಿ: ಬಾಂಗ್ಲಾದೇಶ ವಿರುದ್ದದ ಸೂಪರ್ 12 ಪಂದ್ಯಕ್ಕೆ ಮಳೆ ಅಡ್ಡಿಯಾದರೂ ರೈಲಿ ರುಸ್ಸೋ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಭರ್ಜರಿ ರನ್ ಪೇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ನಾಯಕನ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಬವುಮಾ ಎರಡು ರನ್ ಗೆ ಔಟಾದರು. ಬಳಿಕ ಜೊತೆಯಾದ ಡಿಕಾಕ್ ಮತ್ತು ರೈಲಿ ರುಸ್ಸೋ ಎರಡನೇ ವಿಕೆಟ್ ಗೆ 168 ರನ್ ಜೊತೆಯಾಟವಾಡಿದರು.
38 ಎಸೆತ ಎದುರಿಸಿದ ಡಿಕಾಕ್ 63 ರನ್ ಮಾಡಿದರೆ, ಉತ್ತಮ ಫಾರ್ಮ್ ಮುಂದುವರಿಸಿದ ರೈಲಿ ರುಸ್ಸೋ 56 ಎಸತೆಗಳಲ್ಲಿ ಎಂಟು ಸಿಕ್ಸರ್ ಸಹಿತ 109 ರನ್ ಗಳಿಸಿದರು. ಸತತ ಎರಡು ಇನ್ನಿಂಗ್ಸ್ ಗಳಲ್ಲಿ ಎರಡು ಶತಕ ಬಾರಿಸಿದ ರುಸ್ಸೋ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದರು.
ಇದನ್ನೂ ಓದಿ:ಅಮೂಲ್ಯ ನಿಧಿಯಾಗಿ ಇಡುತ್ತೇನೆ: ರಜನಿ ಆಶೀರ್ವಾದಕ್ಕೆ ಕಿರಗಂದೂರು ಪ್ರತಿಕ್ರಿಯೆ
ಒಂದು ಹಂತದಲ್ಲಿ 14 ಓವರ್ ಗಳಲ್ಲಿ 170 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಅಂತಿಮ ಓವರ್ ಗಳಲ್ಲಿ ಎಡವಿತು. ಸತತ ವಿಕೆಟ್ ಕಳೆದುಕೊಂಡ ಹರಿಣಗಳು ಕೊನೆಯ ಐದು ಓವರ್ ಗಳಲ್ಲಿ ಗಳಿಸಿದ್ದು 29 ರನ್ ಮಾತ್ರ. ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು.