Advertisement

ಖಾಸಗೀತನದ ಹಕ್ಕಿಗೆ ಮೂಲಭೂತ ಹಕ್ಕಿನ ಪೂರ್ಣಾರ್ಹತೆ ಇಲ್ಲ: ಕೇಂದ್ರ

07:19 PM Jul 26, 2017 | Team Udayavani |

ಹೊಸದಿಲ್ಲಿ : ”ಖಾಸಗಿತನದ ಹಕ್ಕು ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕಿನ ಪೂರ್ಣಾರ್ಹತೆಯನ್ನು ಹೊಂದಿರುವುದಿಲ್ಲ” ಎಂದು ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟ್‌ ಮುಂದೆ ಹೇಳಿದೆ. 

Advertisement

“ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎನ್ನಬಹುದೇ ಆದರೂ ಅದು ಸ್ವಯಂ ಪರಿಪೂರ್ಣ ಮೂಲಭೂತ ಹಕ್ಕಾಗಿರುವುದಿಲ್ಲ. ಖಾಸಗಿತನದ ಹಕ್ಕು ಹಲವಾರು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇದು ಸ್ವಚ್ಚಂದತೆಯ ಹಕ್ಕಿನಡಿ ಗುರುತಿಸಲ್ಪಡುತ್ತದೆ; ಇದರ ಎಲ್ಲ ಆಯಾಮಗಳು ಮೂಲಭೂತ ಹಕ್ಕೆನಿಸಿಕೊಳ್ಳುವ ಅರ್ಹತೆಯನ್ನು ಹೊಂದಿರುವುದಿಲ್ಲ’ ಎಂದು ಆಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಇಂದು ಗುರುವಾರ, ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಸರ್‌ ನೇತೃತ್ವದ 9 ನ್ಯಾಯಮೂರ್ತಿಗಳ ಪೀಠದ ಮುಂದೆ ಹೇಳಿದರು. 

ಖಾಸಗೀತನದ ಹಕ್ಕನ್ನು ಸಂವಿಧಾನದಡಿ ಮೂಲಭೂತ ಹಕ್ಕೆಂದು ಪರಿಗಣಿಸಬಹುದೇ ಎಂಬ ವಿಚಾರದಲ್ಲಿ  ನಡೆಯುತ್ತಿರುವ ವಿಚಾರಣೆಯಲ್ಲಿ  ಮಧ್ಯಪ್ರವೇಶಿಸಬೇಕೆಂದು ಕೋರಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಲ ಸಹಿತ ನಾಲ್ಕು ಬಿಜೆಪಿಯೇತರ ರಾಜ್ಯಗಳು ಸಲ್ಲಿಸಿರುವ ಮನವಿಯ ಮೇಲಿನ ವಿಚಾರಣೆಯನ್ನು 9 ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ ಪೀಠವು ಕೈಗೆತ್ತಿಕೊಂಡಿದೆ. 

ಖಾಸಗೀತನದ ಹಕ್ಕು ಸಾಮಾನ್ಯ ಕಾನೂನಾಗಿದ್ದು ಅದು ಮೂಲಭೂತ ಹಕ್ಕಾಗಿರುವುದಿಲ್ಲ ಎಂಬ ಕೇಂದ್ರ ಸರಕಾರದ ನಿಲುವಿಗೆ ವಿರುದ್ಧವಾದ ನಿಲುವನ್ನು ಕರ್ನಾಟಕ ಮತ್ತು ಪಶ್ಚಿಮ ಬಂಗಾಲ ಮಾತ್ರವಲ್ಲದೆ ಪಂಜಾಬ್‌ ಮತ್ತು ಪುದಚೇರಿ ಸರಕಾರಗಳು ಹೊಂದಿರುವ ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠವು ಈ ಸಾಂವಿಧಾನಿಕ ಪ್ರಶ್ನೆಯ ವಿಚಾರಣೆಯನ್ನು ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next