ಪಿರಿಯಾಪಟ್ಟಣ: ಪ್ರತಿಯೊಬ್ಬ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತಾವೇ ಪಕ್ಷದ ಅಭ್ಯರ್ಥಿಯೆಂಬಂತೆ ತಮ್ಮ ತಮ್ಮ ಬೂತ್‌ಗಳನ್ನು ಸದೃಢಗೊಳಿಸಬೇಕೆಂದು ಬಿಜೆಪಿ ವಿಭಾಗ ಪ್ರಭಾರಿ ಪಣೀಶ್ ತಿಳಿಸಿದರು. ಅವರು ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಬೂತ್ ಸಶಕ್ತಿಕರಣ ಸಭೆಯಲ್ಲಿ ಬೂತ್ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು.
ಚುನಾವಣೆಗೆ ಕೆಲವೇ ತಿಂಗಳಿದ್ದು ಕಾರ್ಯಕರ್ತರು ಮಂಡಲದ ಪ್ರತಿಯೊಂದು ಬೂತ್‌ಗಳಿಗೆ ತೆರಳಿ ಕೇಂದ್ರ ಸರ್ಕಾರ ತಂದಿರುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುವುದರೊಂದಿಗೆ ಸಶಕ್ತ ಮತಗಟ್ಟೆ ತಂಡಗಳನ್ನು ರಚಿಸಬೇಕು, ಬಿಎಲ್‌ಎ-2 ಹಾಗೂ ಮತಗಟ್ಟೆ ಸಮಿತಿ ಸದಸ್ಯರು ಸಕ್ರೀಯರಾಗಿ ಹೊಸ ಮತದಾರರ ಸೇರ್ಪಡೆ ಚರುಕುಗೊಳಿಸಬೇಕು,
ಪ್ರತಿ ಬೂತ್ ಉಸ್ತುವಾರಿಗಳು ನಿತ್ಯ 2 ಗಂಟೆ ಸಮಯನೀಡಿ ಸಂಘಟನೆಗೆ ಒತ್ತು ನೀಡಿ, ನಿಮ್ಮ ಬೂತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಯತ್ತ ಹೆಚ್ಚು ಮತಗಳನ್ನು ಸೆಳೆಯಬೇಕೆಂದು ತಿಳಿಸಿದರು. ಬಿಜೆಪಿ ತಾ.ಅಧ್ಯಕ್ಷರಾದ ಪಿ.ಜೆ.ರವಿ ಮಾತನಾಡಿ, ಪಕ್ಷವು ಮಂಡಲದ 220 ಬೂತ್‌ಗಳಲ್ಲೂ ಬಿಎಲ್‌ಎ-2 ಹಾಗೂ ಮತಗಟ್ಟೆ ಸ್ಥಾನೀಯ ಸಮಿತಿ ರಚಿಸಲಾಗಿದ್ದು, ಸದಸ್ಯರು ಇಂದಿನಿಂದಲೇ ಸಕ್ರೀಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಹೊಸಮತದಾರರು, ಯುವ ಜನತೆ ಬಿಜೆಪಿ ಪರ ಒಲವಿದ್ದು ತಾಲೂಕಿನ ಜನತೆ ಬದಲಾವಣೆ ಬಯಸಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಕಾಣುವ ವಿಶ್ವಾಸವಿದೆ ಎಂದು ತಿಳಿಸಿದರು. ಮಾಜಿ ಅರಣ್ಯ ಸಚಿವರಾದ ಸಿ.ಹೆಚ್.ವಿಜಯಶಂಕರ್, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಪರೀಕ್ಷಿತ್ ರಾಜೇ ಅರಸ್, ಬಾಲಕೃಷ್ಣ, ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಆರ್.ನಾರಾಯಣರಾವ್, ತಾಲೂಕು ಉಪಾಧ್ಯಕ್ಷರಾದ ಶಿವರಾಮೇಗೌಡ,
-ಬಸವರಾಜು, ಅಶಾ, ಜಿಲ್ಲಾ ಕಾರ್ಯದರ್ಶಿಗಳಾದ ಭಾಗ್ಯ, ರಾಜೇಗೌಡ, ಕಿರಣ್‌ಜೈರಾಮ್‌ಗೌಡ, ಆನಂದ್, ಮೋರ್ಚಾ ಅಧ್ಯಕ್ಷರಾದ ಲಕ್ಷಿನಾರಾಯಣ, ತಿರುಮಲ್ಲೇಶ್ವರಿ, ನಾರಾಯಣ, ವೀರಭದ್ರ, ಮಹದೇವ್, ಮುಖಂಡರಾದ ಬೆಮ್ಮತ್ತಿಕೃಷ್ಣ, ವಿಕ್ರಂರಾಜ್, ರಾಜೇಗೌಡ, ಆರ್.ಟಿ.ಸತೀಶ್, ರಾಮೇಗೌಡ, ನಾಗೇಶ್, ಶರವಣ ಇತರರಿದ್ದರು.