Advertisement
ಈಗ ಪಟ್ಟಣದ ಬಾಬು ಜಗಜೀವನರಾವ್ ವೃತ್ತ, ಬಸ್ ನಿಲ್ದಾಣ ಹಾಗೂ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಜಾಗದಲ್ಲಿ ತರಕಾರಿ ವ್ಯಾಪಾರ-ವಹಿವಾಟು ನಡೆಯುತ್ತಿದ್ದು, ಗಾಂಧಿವೃತ್ತ, ಬಸವೇಶ್ವರ ವಾರ್ಡ್, ಭಗತ್‌ಸಿಂಗ್, ಅಶೋಕ ವಾರ್ಡ್ ಸೇರಿದಂತೆ ಇತರೆ ವಾರ್ಡ್‌ನ ನಿವಾಸಿಗಳು ತರಕಾರಿ ಖರೀದಿಗೆ ಇಲ್ಲಿಗೇ ಬರಬೇಕು. ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಜಾಗದಲ್ಲಿ ಶೆಡ್ ಹಾಕಿಕೊಂಡು ಕೆಲ ವ್ಯಾಪರಿಗಳು ತರಕಾರಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರಾದರೂ ಇಲ್ಲಿಯೂ ಒಂದು ಸಿಕ್ಕರೆ ಸಿಕ್ಕರೆ, ಇನ್ನೊಂದು ಸಿಗಲ್ಲ. ಹೀಗಾಗಿ ಒಂದೇ ಕಡೆ ಎಲ್ಲವೂ ಸಿಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಹಕರ ಬೇಡಿಕೆಯಾಗಿದೆ.
Related Articles
Advertisement
ಅಶೋಕ ವಾರ್ಡ್‌ನಲ್ಲಿ ನಿರ್ಮಿಸಲಾದ ತರಕಾರಿ ಮಳಿಗೆಗಳು ಕುಡಿವ ನೀರು, ವಿದ್ಯುತ್ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು. ಮಳಿಗೆಗಳ ಸಮಸ್ಯೆ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. -ಎಚ್.ಶಿವರಾಜ, ಕಸಾಪ ಮಾಜಿ ಅಧ್ಯಕ್ಷ
ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆ ಖಾಲಿ ನಿವೇಶನ ಲಭ್ಯವಿದ್ದರೆ ಪ್ರತ್ಯೇಕ ತರಕಾರಿ ಮಾರುಕಟ್ಟೆ ನಿರ್ಮಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಕಿಮೀ ಅಲೆದು ತರಕಾರಿ ತರುವ ಸ್ಥಿತಿ ತಪ್ಪುತ್ತದೆ. ಒಂದೇ ಕಡೆ ಎಲ್ಲ ಸೌಲಭ್ಯ ಸಿಕ್ಕಂತಾಗುತ್ತದೆ. -ಶಾಂತಕುಮಾರ ಹೊನ್ನಟಗಿ, ಎಂಆರ್‌ಎಚ್‌ಎಸ್ ತಾಲೂಕಾಧ್ಯಕ್ಷ.
ಕಟ್ಟರಕಟ್ಟಿಯಲ್ಲಿ ತರಕಾರಿ ಮಾರಲಾಗುತ್ತದೆ. ಇಲ್ಲಿ ಒಂದು ಸಿಕ್ಕರೆ ಮತ್ತೂಂದು ಸಿಗಲ್ಲ. ಅಗತ್ಯ ಬಿದ್ದಲ್ಲಿ ಬಸ್ ನಿಲ್ದಾಣ, ಬಾಬು ಜಗಜೀವನರಾಮ್ ವೃತ್ತ, ಸಹಕಾರಿ ಸಂಘದ ಜಾಗದಲ್ಲಿ ಮಾರುವ ತರಕಾರಿ ಅಂಗಡಿಗಳಿಗೆ ಅಲೆಯಬೇಕಿದೆ. -ಅಮೃತಾ ಪಾಟೀಲ್, ಕರವೇ ಮಹಿಳಾ ಘಟಕ ಅಧ್ಯಕ್ಷೆ
-ನಾಗರಾಜ ತೇಲ್ಕರ್