Advertisement
ಮೇ 12ರ ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಮಾಡುತ್ತಿರುವ ಭರಾಟೆಯ ಆರೋಪ – ಪ್ರತ್ಯಾರೋಪಗಳ ಪ್ರಚಾರ ಶೈಲಿ ತಾರಕಕ್ಕೇರುತ್ತಿದೆ. ಕೋಲಾರದಲ್ಲಿಂದು ರಾಹುಲ್ ಗಾಂಧಿ ಸೈಕಲ್ ಏರುವ ಮೂಲಕ ತಮ್ಮ ಪ್ರಚಾರಾಭಿಯಾನಕ್ಕೆ ಹೊಸ ಮೆರುಗು ನೀಡಿ ಜನಸಾಮಾನ್ಯರೊಂದಿಗೆ ಬೆರೆತುಕೊಂಡರು.
#WATCH Congress President Rahul Gandhi campaigns on a bicycle in Karnataka's Kolar. #KarnatakaElections2018 pic.twitter.com/8ayz4hN0Cm — ANI (@ANI) May 7, 2018
Related Articles
Advertisement
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪ್ರದಾನಿ ಮೋದಿ ಮಾಡಿದ್ದೇನೆ ಎಂದು ಪ್ರಶ್ನಿಸಿದ ರಾಹುಲ್, “ನಿಮಗೆಲ್ಲ ತಿಳಿದಿರುವ ಹಾಗೆ ಮೊಬೈಲ್ ಫೋನಿನಲ್ಲಿ 3 ಮೋಡ್‌ಗಳಿರುತ್ತವೆ – ವರ್ಕ್ ಮೋಡ್, ಸ್ಪೀಕರ್ ಮೋಡ್ ಮತ್ತು ಏರ್‌ಪ್ಲೇನ್ ಮೋಡ್; ಆದರೆ ಮೋದಿ ಜೀ ಅವರು ಕೇವಲ ಸ್ಪೀಕರ್ ಮೋಡ್ ಮತ್ತು ಏರ್‌ಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆ; ಅವರು ಯಾವತ್ತೂ ವರ್ಕ್ ಮೋಡ್ ಬಳಸುವುದೇ ಇಲ್ಲ’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ ಅವರು ಪರೋಕ್ಷವಾಗಿ ”ಮೋದಿ ಅವರು ಸದಾ ಭಾಷಣದಲ್ಲಿ ನಿರತರಾಗಿರುತ್ತಾರೆ (ಸ್ಪೀಕರ್ ಮೋಡ್), ಸದಾ ವಿದೇಶ ಪ್ರಯಾಣದಲ್ಲಿ ತೊಡಗಿರುತ್ತಾರೆ (ಏರ್‌ಪ್ಲೇನ್ ಮೋಡ್), ಕೆಲಸವನ್ನು ಮಾತ್ರ ಮಾಡುವುದಿಲ್ಲ (work mode)” ಎಂಬುದನ್ನು ಧ್ವನಿಸಿದರು.
ಪ್ರಧಾನಿ ಮೋದಿ ಅವರು ಈ ಮೊದಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಯೋಜನೆಗಳನ್ನೇ ರೀ ಪ್ಯಾಕೇಜ್ ಮಾಡಿ ಜನರ ಮುಂದಿಡುತ್ತಿದ್ದಾರೆ ಮತ್ತು ಅವುಗಳ ಸಂಪೂರ್ಣ ಲಾಭವನ್ನು ಹೊಡೆದುಕೊಳ್ಳುತ್ತಿದ್ದಾರೆ; ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಮೋದಿ ಮೌನಾಚರಣೆ ಮಾಡುತ್ತಾರೆ; ಭ್ರಷ್ಟ ರಾಜಕಾರಣಿಗಳಿಗೆ ಎಲೆಕ್ಷನ್ ಟಿಕೆಟ್ ನೀಡಿ ಭ್ರಷ್ಟಾಚಾರವನ್ನು ಉತ್ತೇಜಿಸುತ್ತಾರೆ ಎಂದು ರಾಹುಲ್ ಪುನರುಚ್ಚರಿಸಿದರು.