Advertisement

ಖಾಸಗಿ ಆಸ್ಪತ್ರೆ ಮೇಲೆ ಸವಾರಿ: ಆಕ್ರೋಶ

03:34 PM Jun 17, 2017 | Team Udayavani |

ಕಲಬುರಗಿ: ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ರಾಜ್ಯವ್ಯಾಪಿ ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಘದ ಕರೆಯ ಮೇಲೆ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಿ ವೈದ್ಯರು ಮುಷ್ಕರಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. 

Advertisement

ಖಾಸಗಿ ಆಸ್ಪತ್ರೆಗಳ ಬಂದ್‌ನಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು. ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದವು. ಹೀಗಾಗಿ ರೋಗಿಗಳು ಪರದಾಡುವಂತಾಯಿತು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಕಿರಣ ದೇಶಮುಖ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 

ಈಗಾಗಲೇ ಹಲವಾರು ಜಿಲ್ಲೆಯ ವೈದ್ಯರು ಬೆಂಗಳೂರಲ್ಲಿ ನಡೆಯುವ ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಮುಷ್ಕರ ನಡೆಸಿದ್ದೆವೆ ಎಂದು ಡಾ| ಕಿರಣ ದೇಶಮುಖ ಸುದ್ದಿಗಾರರಿಗೆ ತಿಳಿಸಿದರು. ಪ್ರತಿಭಟನೆಯಲ್ಲಿ ಡಾ| ಭರತ ಕೋಣಿನ್‌ ಸೇರಿದಂತೆ ಅನೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗವಹಿಸಿದ್ದರು. 

ಜೇವರ್ಗಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2017 ವಿರೋಧಿ ಸಿ ಶುಕ್ರವಾರ ಪಟ್ಟಣದಲ್ಲಿ ಖಾಸಗಿ ವೈದ್ಯರ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಖಾಸಗಿ ಆಸ್ಪತ್ರೆಗಳ ಮೇಲೆ ಸವಾರಿ ಮಾಡಲು ಹೊರಟಿರುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಖಂಡನೀಯ.

ವಿಧೇಯಕದಿಂದ ಖಾಸಗಿ ವೈದ್ಯಕೀಯ ಸೇವೆಗೆ ಮಾರಾಣಾಂತಿಕ ಶಾಸನವಾಗಿದ್ದು, ಕಾನೂನಿನ ಪ್ರಕಾರ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದ ರೋಗಿಗಳಿಗೆ ಸೇವೆ ಒದಗಿಸಲು ಅಸಾಧ್ಯವಾಗುತ್ತದೆ. ಆದ್ದರಿಂದ ಈ ಕಾನೂನನ್ನು ಜಾರಿಗೊಳಿಸದೆ ತಕ್ಷಣವೇ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದರು. 

Advertisement

ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆ ಸಂಘದ ಪದಾ  ಧಿಕಾರಿಗಳು ಅರ್ಧ ದಿನದ ಮಟ್ಟಿಗೆ ಆಸ್ಪತ್ರೆಗಳನ್ನು ಬಂದ್‌ ಮಾಡಿ ಪಟ್ಟಣದ ಅಖಂಡೇಶ್ವರ ವೃತ್ತದಿಂದ ಮಿನಿ ವಿಧಾನಸೌಧ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಖಾಸಗಿ ವೈದ್ಯರ ಸಂಘದ ಡಾ| ಅಮರೇಶ ಕೋಳಕೂರ, ಡಾ| ನಾರಾಯಣರಾವ್‌ ಪಾಗಾ, ಡಾ| ಪಿ.ಎಂ.ಮಠ, ಡಾ| ಶರಣಗೌಡ ಪಾಟೀಲ, ಡಾ| ಸುಧೀರ ವೇರೆಕರ್‌, ಡಾ| ಪ್ರಶಾಂತ ಪಾಟೀಲ, ಡಾ| ಎಂ.ಡಿ.ಒಡೆಯರ್‌, ಡಾ| ಅಜಿತ್‌ಸಿಂಗ್‌ ಠಾಕೂರ,

-ಡಾ| ರಾಜಶೇಖರ, ಡಾ| ಅಶೋಕ ಗುತ್ತೇದಾರ, ಡಾ| ಜಿ.ಆರ್‌.ಕುಲಕರ್ಣಿ, ಡಾ| ನಬಿ ಪಟೇಲ, ಡಾ| ಎಂ.ಎಸ್‌.ಪಾಟೀಲ, ಡಾ| ಅಲಿಯಾ , ಡಾ| ನಾಗರತ್ನ ಏರಿ, ಡಾ| ನಾಗರಾಜ ಹಿರೇಮಠ, ಡಾ| ಮಹಾಂತೇಶ ಹಿರೇಮಠ, ಡಾ| ಇಂತೇಕಾರ ಪಟೇಲ, ಡಾ| ಫಜಲ್‌ ರಹೀಮ್‌ ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next