Advertisement

ರಾಜನ್‌ಗೆ ದಕ್ಕದ ನೊಬೆಲ್‌ ಅರ್ಥಶಾಸ್ತ್ರ ಪ್ರಶಸ್ತಿ ಥ್ಯಾಲರ್‌ಗೆ

07:00 PM Oct 09, 2017 | Team Udayavani |

ಸ್ಟಾಕ್‌ಹೋಮ್‌ : ಅಮರಿಕ ಖ್ಯಾತ ಅರ್ಥಶಾಸ್ತ್ರಜ್ಞ, ರಿಚರ್ಡ್‌ ಥ್ಯಾಲರ್‌ಗೆ ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್‌ ಪ್ರಶಸ್ತಿ ಲಭಿಸಿದೆ. 

Advertisement

ಈ ಬಾರಿಯ ನೊಬೆಲ್‌ ಅರ್ಥಶಾಸ್ತ್ರ ಪ್ರಶಸ್ತಿಯ ಪಟ್ಟಿಯಲ್ಲಿ ಭಾರತದ ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಹೆಸರು ಇತ್ತೆಂಬ ವರದಿಗಳಿಂದಾಗಿ ವಿಶ್ವಾದ್ಯಂತದ ಭಾರತೀಯರಲ್ಲಿ  ಭಾರೀ ಕುತೂಹಲ, ನಿರೀಕ್ಷೆ ಮನೆ ಮಾಡಿತ್ತು. ಆದರೀಗ ಅವೆಲ್ಲವೂ ಠುಸ್ಸಾಗಿ ಭಾರೀ ನಿರಾಶೆ ಉಂಟುಮಾಡಿದೆ. 

ಅರ್ಥಶಾಸ್ತ್ರ ಮತ್ತು ಮನೋಶಾಸ್ತ್ರದ ನಡುವಿನ ಅಂತರವನ್ನು ತುಂಬಿಸುವ ಪ್ರವರ್ತನಕಾರಿ ಕೆಲಸವನ್ನು ಮಾಡಿರುವುದಕ್ಕಾಗಿ ಥ್ಯಾಲರ್‌ಗೆ ನೊಬೆಲ್‌ ಪ್ರಶಸ್ತಿ ಸಂದಿರುವುದಾಗಿ ತೀರ್ಪುಗಾರರು ಹೇಳಿದ್ದಾರೆ.

“ಪರಿಮಿತ ವೈಚಾರಿಕತೆ, ಸಾಮಾಜಿಕ ಆದ್ಯತೆ ಮತ್ತು ಸ್ವನಿಯಂತ್ರಣದ ಕೊರತೆಯು ಹೇಗೆ ವೈಯಕ್ತಿಕ ನಿರ್ಧಾರಗಳ ಮೇಲೆ ಮತ್ತು ಅದರಿಂದಾಗಿ ಮಾರುಕಟ್ಟೆ ಫ‌ಲಿತಾಂಶಗಳ ಮೇಲೆ ವ್ಯವಸ್ಥಿತವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಥ್ಯಾಲರ್‌ ಅರ್ಥಶಾಸ್ತ್ರಜ್ಞ ಮತ್ತು ಮನೋಶಾಸ್ತ್ರಜ್ಞನಾಗಿ ಅನ್ವೇಷಿದ್ದಾರೆ’ ಎಂದು ನೊಬೆಲ್‌ ಪ್ರಶಸ್ತಿ ಮಂಡಳಿಯ ತೀರ್ಪುಗಾರರ ಪ್ರಕಟನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next