Advertisement
ಅವರ ಈ ಕೃಷಿ ಯಶೋಗಾಥೆಗೆ ಕೊರೊನಾದಿಂದಾಗಿ ಸಿಕ್ಕ ಲಾಕ್‌ಡೌನ್ ಸಮಯವೂ ಸಾಕಷ್ಟು ನೆರವಾಗಿದೆ. ಶಂಕರ ನಾಯ್ಕ ಅವರು ಹಡಿಲು ಬಿಟ್ಟಿದ್ದ 20 ಸೆಂಟ್ಸ್ ಜಾಗವನ್ನು ಲೀಸ್‌ಗೆ ಪಡೆದು, ಅದರಲ್ಲಿ ಹೀರೆ, ಪಡುವಲ, ಬದನೆ, ತೊಂಡೆ, ಸಾಂಬ್ರಾಣಿ, ಅಲಸಂಡೆ ಹೀಗೆ ತರಹೇವಾರಿ ತರಕಾರಿ ಕೃಷಿ ಮಾಡಿದ್ದಾರೆ.
ಹಿಂದೆ ಮನೆಯ ಪರಿಸರದಲ್ಲಿ ಮಾತ್ರ ತರಕಾರಿ, ತೋಟಗಾರಿಕೆ ಮಾಡುತ್ತಿದ್ದ ಇವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರ ಮಾರುತಿ ಪ್ರಗತಿಬಂಧು ತಂಡ ಸೇರಿದ ಬಳಿಕ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡುವ ಉತ್ಸಾಹ ಮೂಡಿತು.
ಹೀರೆ, ಪಡುವಲಕ್ಕೆ ಏಕರೂಪದಲ್ಲಿ ಚಪ್ಪರ ಮಾಡಿದ್ದಾರೆ. ಬಳ್ಳಿಗಳು ಮೇಲೇರಲು ಬಲೆಯನ್ನು ಬಳಸಿದ್ದಾರೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ತರಕಾರಿಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಆದರೂ ವಾರಕ್ಕೆ 70 ಕೆ.ಜಿ. ಪಡುವಲ, 50 ಕೆ.ಜಿ. ಹೀರೆ ಕೊಯ್ಲು ಮಾಡುತ್ತಿದ್ದಾರೆ. ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ತರಕಾರಿ ಬೆಳೆಗಳಿಗೆ ಮಳೆಯಿಂದ ಹಾನಿಯಾಗಿರುವುದರಿಂದ ಊರಿನ ತರಕಾರಿಗಳಿಗೆ ಉತ್ತಮ ಬೇಡಿಕೆಯ ಜತೆಗೆ ಒಳ್ಳೆಯ ಬೆಲೆಯು ಸಿಗುತ್ತಿದೆ ಎನ್ನುತ್ತಾರೆ ಶಂಕರ ನಾಯ್ಕ.