ರೈತ. ಈ ರೈತ ಮೂರು ವರ್ಷ ಕಾಲ ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದಿದ್ದು, ಪ್ರತಿ ವರ್ಷ 3ಲಕ್ಷ ರೂ. ಮುಂಗಡ ನೀಡಿ 16 ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆ ತೆಗೆದಿದ್ದಾನೆ. ವರ್ಷಪೂರ್ತಿ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡಿ, ಸರಿ ಪ್ರಮಾಣದ ಗೊಬ್ಬರ ಉಣಿಸಿ ಸಮೃದ್ಧ ಬೆಳೆ ಬೆಳೆದು ಮಾದರಿಯಾಗಿದ್ದಾನೆ ಈ ರೈತ. ಅಲ್ಲದೇ ಹಸಿ ಮೆಣಸಿನಕಾಯಿ ಮಾರಾಟದಿಂದ ತಾನು ನೀಡಿದ ಕರಾರಿನ ಹಣವನ್ನು ಮರಳಿ ಪಡೆದಿದ್ದಾನೆ. ಮುಂದೆ ಬರುವ ಕೆಂಪು ಮೆಣಸಿನಕಾಯಿ ಪೂರ್ಣ ಲಾಭ ತಂದು ಕೊಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಾನೆ.
Advertisement
ಹೊಲದೊಳಗೆ ಜೋಪಡಿ ಹಾಕಿಕೊಂಡು ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸುತ್ತೇವೆ. ಭೂಮಿಗೆ ತಕ್ಕಂತೆ ಗೊಬ್ಬರ ಹಾಕುತ್ತೇವೆ. ಔಷಧ ಮತ್ತು ನೀರು ಬಿಡುವ ಕೆಲಸವನ್ನು ನಾನೇ ಮಾಡ್ತಿನಿ. ಇಲ್ಲಿನ ರೈತರು ಭೂಮಿಗೆ ಖರ್ಚು ಮಾಡಲು ಹಿಂಜರಿಯುತ್ತಾರೆ. ಹಸಿ ಮೆಣಸಿನಕಾಯಿ ಮಾರಿ ಎರಡೂಮೂರು ಲಕ್ಷ ರೂ. ಬಂದಿವೆ. ಕೆಂಪುಕಾಯಿಗೆ ಸದ್ಯದ ಬೆಲೆ ಸಿಕ್ಕರೆ 25 ಲಕ್ಷ ರೂ. ವರೆಗೂ ಲಾಭ ಆಗುತ್ತದೆ.ಕೆ. ವೀರಯ್ಯ, ಆಂಧ್ರ ಮೂಲದ ರೈತ