ಅಕ್ಕಿ- 3 ಲೋಟ, ಜೀರಿಗೆ- 2 ಟೀ ಚಮಚ, ಬೆಲ್ಲ – 3 ಟೀ ಚಮಚ, ಉಪ್ಪು$ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಚಟ್ನಿ ಮಾಡಲು: ತೆಂಗಿನಕಾಯಿ – 1 ಬಟ್ಟಲು, ಒಣಮೆಣಸು 3- 5, ಈರುಳ್ಳಿ 1, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ 2 ಚಮಚ.
Advertisement
ತಯಾರಿಸುವ ವಿಧಾನ:ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿ, ತೊಳೆದು, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡು, ಒಂದು ಬಾಣಲೆಗೆ ಹಾಕಿ ಕಾಯಿಸಿ. ಕಾಯಿಸುವಾಗ ಉಂಡೆ ಆಗದ ಹಾಗೆ ಸೌಟಿನಿಂದ ತಿರುವುತ್ತಿರಿ. ತಳ ಬಿಟ್ಟ ಮೇಲೆ ಇಳಿಸಿ. ತಣ್ಣಗಾದ ಮೇಲೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮೃದುವಾಗುವವರೆಗೆ ನಾದಬೇಕು. ನಂತರ ಚಿಕ್ಕ- ಚಿಕ್ಕ ಉಂಡೆಯನ್ನು ಮಾಡಿ ಪೂರಿ ತರಹ ತಟ್ಟಿ ಎಣ್ಣೆಯಲ್ಲಿ ಉಬ್ಬಿಬರುವವರೆಗೆ ಕರಿಯಬೇಕು. ಇದು ಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.