Advertisement

ಅಕ್ಕಿ ಸಾಗಾಟದ ಲಾರಿ ಪಲ್ಟಿ ; ಸಂಚಾರ ಅಸ್ತವ್ಯಸ್ತ

03:35 AM Feb 16, 2017 | |

ಕಾಪು: ರಾ. ಹೆ. 66ರ ಉದ್ಯಾವರ ಜಂಕ್ಷನ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಅಕ್ಕಿ ಸಾಗಾಟದ ಲಾರಿ ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಬುಧಧಿವಾರ  ಮುಂಜಾನೆ ಸಂವಿಸಿದೆ. ಮುಂಡಗೋಡಿನಿಂದ ಪುತ್ತೂರಿಗೆ ತೆರಳುತ್ತಿದ್ದ ಅಕ್ಕಿ ಸಾಗಾ ಟದ ಲಾರಿ ಹೆದ್ದಾರಿ ಡಿವೈಡರ್‌ ಮೇಲೇರಿ ಬಳಿಕ ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿತ್ತು. ಅಕ್ಕಿ ಮೂಟೆಗಳು ಹರಿದು ಹೆದ್ದಾರಿ ತುಂಬೆಲ್ಲಾ ಅಕ್ಕಿ ಚೆಲ್ಲಾಪಿಲ್ಲಿಯಾಗಿ ಹರಡಿತು.

Advertisement

ಕಟಪಾಡಿ ಹೊರಠಾಣಾ ಎಎಸ್‌ಐ ಪುರುಷೋತ್ತಮ್‌, ಹೆದ್ದಾರಿ ಗಸ್ತು ವಾಹನದ ಎಎಸ್‌ಐ ಶಿವ ಕುಮಾರ್‌ ಮತ್ತು ಸಿಬಂದಿ ಸ್ಥಳೀಯರ ಸಹಕಾರ ದೊಂದಿಗೆ ಅಕ್ಕಿ ಚೀಲ ಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸಂಚಾರ ಸುಗಮ ಗೊಳಿಸಿದರು.  ಲಾರಿಯಲ್ಲಿದ್ದ ಚಾಲಕ ಮತ್ತು ಕೀನರ್‌ ಪ್ರಾಣಾಪಾಯದಿಂದ ಪಾರಾ ಗಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next