Advertisement
ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರೈಸಿದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಉದ್ದಿಮೆ ಇಲಾಖೆ, ಜಿಲ್ಲಾ ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಪಡನ್ನಕ್ಕಾಡ್ ಬೇಕಲ ಕ್ಲಬ್‌ನಲ್ಲಿ ನಡೆದ ಹೂಡಿಕೆದಾರರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿರುವ ವೇಳೆ ಜನತೆಗೆ ನೀಡಿದ್ದ ಭರವಸೆಗಳೆಲ್ಲವೂ ಈಡೇರಿವೆ. ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಗಿರುವ ಅನೇಕ ಯೋಜನೆಗಳು ಜಾರಿಗೊಂಡಿವೆ. ಶಿಲಾನ್ಯಾಸಕ್ಕಷ್ಟೇ ಸೀಮಿತವಾಗದೆ ಆರಂಭಿಸಿದ ಎಲ್ಲ ಯೋಜನೆಗಳನ್ನೂ ಪೂರ್ಣಗೊಳಿಸಲು ಸರಕಾರ ಪ್ರಾಮಾ ಣಿಕ ಯತ್ನ ನಡೆಸಿ ಯಶಸ್ವಿಯಾಗಿದೆ. ಕಾಂಞಂಗಾಡ್ ನಗರಸಭೆಯ ಪುದುಕೈ ಗ್ರಾಮದಿಂದ 4.31 ಎಕರೆ ಜಾಗ, ಮಡಿಕೈ ಗ್ರಾ. ಪಂ.ನಿಂದ ನೀಡಲಾದ ಜಾಗ ಮಡಿಕೈ ಉದ್ದಿಮೆ ಪಾರ್ಕ್ ಆರಂಭಿಸಲು ಉದ್ದಿಮೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ರಾಜ್ಯ ಕಂದಾಯ ಸಚಿವ ಇ. ಚಂದ್ರ ಶೇಖರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ವರದಿ ವಾಚಿಸಿದರು. ಶಾಸಕ ಎಂ. ರಾಜಗೋಪಾಲನ್, ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ| ಪಿ. ಜಯರಾಜನ್, ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ. ಗೌರಿ, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ| ಪಿ. ಜಯರಾಜನ್, ಮಡಿಕೈ ಗ್ರಾ. ಪಂ. ಅಧ್ಯಕ್ಷ ಸಿ. ಪ್ರಭಾಕರನ್, ಕಾಂಞಂಗಾಡ್ ನಗರಸಭೆ ಉಪಾಧ್ಯಕ್ಷೆ ಎನ್. ಸುಲೈಖಾ, ಕುಟುಂಬಶ್ರೀ ಆಡಳಿತ ಸಮಿತಿ ಸದಸ್ಯೆ ಬೇಬಿ ಬಾಲಕೃಷ್ಣನ್, ಕೆಎಸ್‌ಎಸ್‌ಐಎ ಅಧ್ಯಕ್ಷೆ ಸಿ. ಬಿಂದೂ, ಕೆ.ಇ. ಇಮಾನ್ಯುವೆಲ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡನ್ನು ಬೃಹತ್ ವಾಣಿಜ್ಯ ಕೇಂದ್ರವಾಗಿ ಬದಲಿಸಲು ಕ್ರಮ : ಸಚಿವ ಇ. ಚಂದ್ರಶೇಖರನ್ಕಾಸರಗೋಡು ಜಿಲ್ಲೆಯನ್ನು ಬೃಹತ್ ವಾಣಿಜ್ಯ ಕೇಂದ್ರವಾಗಿ, ಕಾಂಞಂಗಾಡನ್ನು ದೊಡ್ಡ ಉದ್ಯಮ ನಗರವಾಗಿ ಬದಲಿಸುವ ಕ್ರಮ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.ಪಡನ್ನಕಾಡಿನ ಬೇಕಲ ಕ್ಲಬ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಹೂಡಿಕೆದಾರರ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೂತನ ಉದ್ದಿಮೆ ನೀತಿಗಳ ಪ್ರಕಾರ ಅನೇಕ ಬದಲಾವಣೆ ಸಾಧ್ಯತೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಉದ್ಯಮ ಕ್ಷೇತ್ರದಲ್ಲೂ ಅಪಾರ ನಿರೀಕ್ಷೆ ಮೂಡಿದೆ. ನೂತನವಾಗಿ ಉದ್ದಿಮೆ ಆರಂಭಿಸಲು ಆಸಕ್ತರಿಗೆ ಆನ್‌ಲೈನ್ ಮೂಲಕ ತಿಂಗಳಲ್ಲಿ ಪರವಾನಿಗೆ ಲಭಿಸಲು ಕ್ರಮಕೈಗೊಳ್ಳಲಾಗಿದೆ. ಮಡಿಕೈಯಲ್ಲಿ 99 ಎಕ್ರೆ ಕಂದಾಯ ಜಾಗ ಉದ್ದಿಮೆ ವಲಯಕ್ಕೆ ಹಸ್ತಾಂತರಗೊಂಡಿದ್ದು, ಜಿಲ್ಲೆಯ ಉದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಉದ್ಯಮ ಕೇಂದ್ರಕ್ಕೆ ಜಾಗ ಹಸ್ತಾಂತರ
ಸಮಾರಂಭದಲ್ಲಿ ಮಡಿಕೈ ಉದ್ಯಮ ಕೇಂದ್ರಕ್ಕಾಗಿ ಜಾಗ ಹಸ್ತಾಂತರ ನಡೆಯಿತು. ಕಂದಾಯ ಸಚಿವ ಇ. ಚಂದ್ರಶೇಖರನ್ ಅವರು ಸಚಿವ ಇ.ಪಿ.ಜಯರಾಜನ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲೆಯಲ್ಲಿ 2018-19 ನೇ ವರ್ಷದ ಉದ್ದಿಮೆ ಆರಂಭಕ್ಕೆ ಸಹಾಯ ವಿತರಣೆ ನಡೆಯಿತು. ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಸ್ವಾಗತಿಸಿದರು. ವಿವಿಧ ವಿಷಯಗಳಲ್ಲಿ ತರಗತಿ ನಡೆಯಿತು.