Advertisement
ಜಿಲ್ಲೆಯಲ್ಲಿ 2018ರ ಏಪ್ರಿಲ್‌ನಿಂದ 2021ರ ಜೂನ್‌ವರೆಗೆ 58 ಪಡಿತರ ಅಕ್ಕಿ ಸಾಗಾಟ-ಮಾರಾಟ ತಡೆದು ಎಫ್‌ಐಆರ್ ದಾಖಲಿಸಿದ್ದು, ಬರೋಬ್ಬರಿ 2.22 ಕೋಟಿ ರೂ. ಗಳ 7 ಸಾವಿರಕ್ಕೂ ಅಧಿಕ ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದೆ. ಇನ್ನೂ ಇಲಾಖೆಯ ಕಣ್ತಪ್ಪಿಸಿ ಕೋಟ್ಯಂತರ ಮೌಲ್ಯದ ಅಕ್ಕಿ ಸಾಗಾಟ ನಡೆದಿದೆ. ಬೀದರ ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಒಂದೆರಡು ದಾಳಿ ನಡೆಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.
Related Articles
Advertisement
ಅಕ್ರಮ ದಂಧೆ ನಡೆದದ್ದೆಷ್ಟು?ಬೀದರ ಜಿಲ್ಲೆಯಲ್ಲಿ 2018ರ ಮಾರ್ಚ್ ನಿಂದ 2019ರ ಮಾರ್ಚ್‌ವರೆಗೆ ವಾಹನ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಪಡಿತರ ಅಕ್ಕಿ ಸಾಗಾಟದ 13 ಎಫ್‌ಐಆರ್ ದಾಖಲಿಸಿ 69.23 ಲಕ್ಷ ರೂ. ಮೌಲ್ಯದ 2423 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದೆ. 2019ರ ಏಪ್ರಿಲ್‌ನಿಂದ 2020ರ ಮಾರ್ಚ್ ವರೆಗೆ 31 ಪ್ರಕರಣದಾಖಲಿಸಿ 1.13 ಕೋಟಿ ರೂ. ಮೌಲ್ಯದ 4062 ಕ್ವಿಂಟಲ್ ಮತ್ತು 40-50 ಕೆಜಿ ತೂಕದ 430 ಚೀಲ ಅಕ್ಕಿ, 2020ರಲ್ಲಿ 21 ಎಫ್‌ಐಆರ್ ದಾಖಲಿಸಿ 92 ಲಕ್ಷ ರೂ. ಮೌಲ್ಯದ 3302 ಕ್ವಿಂಟಲ್ ಅಕ್ಕಿ ಹಾಗೂ 2021ರ ಏಪ್ರಿಲ್‌ನಿಂದ ಜೂನ್‌ವರೆಗೆ 3 ಎಫ್ ಐಆರ್ ದಾಖಲಿಸಿ 49 ಸಾವಿರ ಮೌಲ್ಯದ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ. ಜತೆಗೆ ಎರಡು ವರ್ಷದಲ್ಲಿ 13 ಲಕ್ಷ ಮೌಲ್ಯದ ಗೋವುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಬೀದರ ಗಡಿ ಜಿಲ್ಲೆಯಾಗಿರುವ ಕಾರಣ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಿವೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮತ್ತು ಖರೀದಿ ನಿಯಂತ್ರಣಕ್ಕೆಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧಕ್ರಮ ಕೈಗೊಳ್ಳಲಾಗುತ್ತಿದೆ. ಜಪ್ತಿಯಾದ ಆಹಾರ ಧಾನ್ಯವನ್ನು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಕ್ಷರ ದಾಸೋಹಕ್ಕೆ ನೀಡಲಾಗುತ್ತಿದೆ.
ಬಾಬು ರೆಡ್ಡಿ, ಉಪ ನಿರ್ದೇಶಕರು,
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೀದರ *ಶಶಿಕಾಂತ ಬಂಬುಳಗೆ