ಅಜೆಕಾರು: ಪ್ರಮುಖ ಆಹಾರ ಬೆಳೆಯಾದ ಭತ್ತವನ್ನು ಕಡಿಮೆ ಖರ್ಚಿನಲ್ಲಿ ಬೆಳೆಯುವ ನಿಟ್ಟಿನಲ್ಲಿ ಧ.ಗ್ರಾ. ಯೋಜನೆಯು ಯಂತ್ರಶ್ರೀ ಎಂಬ ಯೋಜನೆ ಹಮ್ಮಿಕೊಂಡಿದೆ. ದಶಕಗಳ ಹಿಂದೆ ಶ್ರೀ ಪದ್ಧತಿ ಮೂಲಕ ರೈತರಿಗೆ ಹೆಚ್ಚಿನ ಲಾಭ ತಂದುಕೊಟ್ಟ ಗ್ರಾಮಾಭಿವೃದ್ಧಿ ಯೋಜನೆಯು ಪ್ರಸಕ್ತ ವರ್ಷ ಯಾಂತ್ರಿಕೃತ ಶ್ರೀ ಪದ್ಧತಿಯನ್ನು ಅನುಷ್ಠಾನಗೊಳಿಸಿ ರೈತರಿಗೆ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚುವರಿ ಇಳುವರಿ ಪಡೆಯಲು ಉತ್ತೇಜಿಸುತ್ತಿದೆ.
ರಾಜ್ಯದಲ್ಲಿ 98 ತಾಲೂಕುಗಳಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು ಕಾರ್ಕಳ ತಾಲೂಕಿನಲ್ಲಿ ಸುಮಾರು 250 ಎಕ್ರೆ ಭತ್ತದ ಗದ್ದೆಯಲ್ಲಿ ಯಾಂತ್ರಿಕೃತ ಶ್ರೀ ಪದ್ದತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಪದ್ಧತಿಯಲ್ಲಿ ಟ್ರೇಗಳ ಮೂಲಕ ಬೀಜ ಬಿತ್ತನೆ ಮಾಡಿ ಅನಂತರ ಯಂತ್ರಗಳ ಮೂಲಕ ಗದ್ದೆ ನಾಟಿ ಮಾಡಲಾಗುತ್ತದೆ.
ಪ್ರತಿ ಎಕ್ರೆ ನಾಟಿಗೆ 25ರಿಂದ 30 ಕೂಲಿ ಆಳುಗಳ ಆವಶ್ಯಕತೆ ಇದ್ದರೆ ಈ ಯೋಜನೆ ಮೂಲಕ ಎಕ್ರೆಗೆ 80 ಟ್ರೇ ಉಪಯೋಗಿಸಿ ಸುಮಾರು 2.15 ಗಂಟೆಗಳಲ್ಲಿ ಕೇವಲ 3,000 ರೂ. ವೆಚ್ಚದಲ್ಲಿ ಒಂದು ಎಕ್ರೆ ನಾಟಿ ಮಾಡಬಹುದು ಎಂದು ಯೋಜನೆಯ ಕೃಷಿ ಅಧಿಕಾರಿ ಹೇಳಿದ್ದಾರೆ.
ಈ ಯೋಜನೆಗೆ ಅವಶ್ಯಕತೆ ಇರುವ ಯಂತ್ರಗಳು ಈಗಾಗಲೇ ಅಜೆಕಾರು ಯಂತ್ರಧಾರೆ ಕೇಂದ್ರದಲ್ಲಿ ಲಭ್ಯವಿದೆ. ಇಲ್ಲಿ 5 ಯಂತ್ರಗಳು ಇದ್ದು ಮುಂದಿನ ದಿನಗಳಲ್ಲಿ ಬೃಹತ್ ಯಂತ್ರಗಳು ರೈತರಿಗೆ ದೊರೆಯಲಿವೆ. ಈ ಪದ್ಧತಿ ಅಳವಡಿಸುವ ರೈತರು ಅಜೆಕಾರು ಯಂತ್ರಧಾರೆ
9481767230ನ್ನು ಸಂಪರ್ಕಿಸ ಬಹುದಾಗಿದೆ.