Advertisement

ಉಡುಪಿ ಜಿಲ್ಲೆ : ಅಕ್ಕಿಗೆ ಕೊರತೆ ಇಲ್ಲ

01:16 PM Apr 16, 2020 | sudhir |

ಹೆಬ್ರಿ: ಲಾಕ್‌ಡೌನ್‌ನಿಂದ ಮುಂದೆ ಸಮಸ್ಯೆಯಾಗಬಹುದು ಎಂದು ಗ್ರಾಹಕರು ಹೆಚ್ಚಿನ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿದ್ದಾರೆ. ಜಿಲ್ಲೆಯ ಅಕ್ಕಿ ಮಿಲ್‌ಗ‌ಳಲ್ಲಿ ಸಾಕಷ್ಟು ಭತ್ತದ ದಾಸ್ತಾನು ಇದೆ. ಅಕ್ಕಿಯ ಕೊರತೆಯಾಗುವ ಭಯವಿಲ್ಲ ಎಂದು ಉಡುಪಿ ಜಿಲ್ಲಾ ಅಕ್ಕಿ ಗಿರಣಿಗಳ ಸಂಘದ ಅಧ್ಯಕ್ಷ ರಮೇಶ್‌ ನಾಯಕ್‌ ತಿಳಿಸಿದ್ದಾರೆ.

Advertisement

ಉಡುಪಿ ಜಿಲ್ಲೆ ಮಾತ್ರವಲ್ಲದೆ ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಭತ್ತದ ಸಂಗ್ರಹವಿದೆ. ಕೃಷಿ ಚಟುವಟಿಕೆ ಮುಂದುವರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳೂ ಆದೇಶ ಹೊರಡಿಸಿವೆ. ಅಲ್ಲದೆ, ಆವಶ್ಯಕ ವಸ್ತುಗಳ ವಿಭಾಗದಲ್ಲಿ ಬರುವುದರಿಂದ ಭತ್ತ ಹಾಗೂ ಅಕ್ಕಿ ಸಾಗಾಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next