ಕೋಲ್ಕತ್ತಾ: ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೊರಟಿದ್ದ ಪ್ರವಾಸಿಗರ ವಾಹನಕ್ಕೆ ಎರಡು ಘೇಂಡಾಮೃಗಗಳು ಢಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಪ್ರವಾಸಿಗರು ಜಲ್ದಪಾರಾ ನ್ಯಾಶನಲ್ ಪಾರ್ಕ್ ನಲ್ಲಿ ಜೀಪ್ ನಲ್ಲಿ ಸಫಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದ ಪೊದೆಗಳಲ್ಲಿ ಎರಡು ಘೇಂಡಾಮೃಗಗಳು ಕಾದಾಟದಲ್ಲಿ ತೊಡಗಿದ್ದವು. ಪ್ರವಾಸಿಗರು ಆ ಕ್ಷಣವನ್ನು ಸೆರೆಹಿಡಿಯಲು ತಮ್ಮ ಕ್ಯಾಮೆರಾಗಳನ್ನು ಕೈಗೆತ್ತಿಕೊಂಡರು.
ಪ್ರವಾಸಿಗರು ಜೀಪ್ ನಲ್ಲಿ ಫೋಟೊ – ವಿಡಿಯೋಗಳನ್ನು ತೆಗೆಯುತ್ತಿದ್ದಾಗ ಘೇಂಡಾಮೃಗಗಳ ದೃಷ್ಟಿ ಇವರತ್ತ ಹರಿಯಿತು. ಇವರು ನೋಡುತ್ತಿದ್ದಂತೆ ಎರಡು ಘೇಂಡಾಮೃಗಳು ಇವರತ್ತ ಧಾವಿಸಿದವರು. ಜೀಪು ಚಾಲಕ ಕೂಡಲೇ ವಾಹನವನ್ನು ಚಲಾಯಿಸಲು ಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ಅವರ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳಿತು.
Related Articles
ಎಲ್ಲಾ ಏಳು ಪ್ರವಾಸಿಗರು ಗಾಯಗೊಂಡಿದ್ದಾರೆ. ಕೆಲವರ ಮೂಳೆ ಮುರಿತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘೇಂಡಾಮೃಗಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಘಟನೆ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.