Advertisement

ಕನ್ನಡದಲ್ಲೂ ಬರ್ತಿದೆ ಆರ್‌ಜಿವಿ ‘ಡಿ ಕಂಪೆನಿ’

02:29 PM Jan 25, 2021 | Team Udayavani |

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ (ಆರ್‌ಜಿವಿ) ಸದ್ಯ ಭೂಗತ ಪಾತಕಿ ದಾವುದ್‌ ಇಬ್ರಾಹಿಂ ಬಯೋಪಿಕ್‌ ನ ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. 2002ರಲ್ಲಿ “ಕಂಪನಿ’ ಸಿನಿಮಾ ಮೂಲಕ ದಾವುದ್‌ ಇಬ್ರಾಹಿಂ ಮತ್ತು ಚೋಟಾ ರಾಜನ್‌ ಬಗ್ಗೆ ಸಂಕ್ಷಿಪ್ತ ಕಥೆ ಹೇಳಿದ್ದ ಆರ್‌ಜಿವಿ, ಇದೀಗ “ಡಿ ಕಂಪನಿ’ ಮೂಲಕ ಪೂರ್ಣ ಪ್ರಮಾಣದಲ್ಲಿ ಮತ್ತೂಂದು ಪಾತಕ ಲೋಕದ ಎಳೆಯನ್ನು ತೆರೆಮೇಲೆ

Advertisement

ತರುತ್ತಿದ್ದಾರೆ. “ಡಿ ಕಂಪನಿ’ಯ ಕಥೆ ಕರಾಚಿಯಿಂದ ತೆರೆದುಕೊಳ್ಳಲಿದ್ದು, ದಾವುದ್‌ ಕ್ರೈಂ ಲೈಫ್ ನ ಸುತ್ತ ಇಡೀ ಸಿನಿಮಾ ನಡೆಯಲಿದೆಯಂತೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಇತ್ತೀಚೆಗೆ “ಡಿ ಕಂಪನಿ’ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ. ಆರ್‌ಜಿವಿ ಸೋಶಿಯಲ್‌ ಮೀಡಿಯಾಗಳಲ್ಲಿ ಟೀಸರ್‌ನ ಹಂಚಿಕೊಂಡಿದ್ದಾರೆ. ಇನ್ನು “ಡಿ ಕಂಪನಿ’ ಚಿತ್ರ ಕನ್ನಡವೂ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಲವ್‌ ಯೂ ರಚ್ಚು’ ಫ‌ಸ್ಟ್‌ ಲುಕ್‌ ಬಿಡುಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next