Advertisement
ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಮನೆ ಮನೆಯಕಸ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸುವುದು ಉದ್ದೇಶದಿಂದ ಪ್ರತಿಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗಿದೆ. ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಯೋಜನೆಗೆ ಪೂರಕವಾಗಿ ಜಪಾನ್ ಮೂಲದ ಎನ್‌ಇಸಿ ಕಂಪನಿ ಈ ಕಾರ್ಯ ನಿರ್ವಹಿಸಿದೆ. ಇದಕ್ಕಾಗಿಸ್ಮಾರ್ಟ್‌ಸಿಟಿ ಕಂಪನಿಯಿಂದ ಕೋಟ್ಯಂತರ ರೂಪಾಯಿಖರ್ಚು ಮಾಡಲಾಗುತ್ತಿದೆ. ಈಗಾಗಲೇ ಮಹಾನಗರವ್ಯಾಪ್ತಿಯಲ್ಲಿ 2.10 ಲಕ್ಷ ಮನೆಗಳಿಗೆ ಈಗಾಗಲೇ ಟ್ಯಾಗ್‌ಅಳವಡಿಸುವ ಕೆಲಸ ಪೂರ್ಣಗೊಂಡಿದ್ದು, ಆದರೆ ಟ್ಯಾಗ್ ಅಳವಡಿಸಿ ತಿಂಗಳುಗಳು ಕಳೆದಿಲ್ಲ. ಕೆಲವೆಡೆ ಮನೆಗಳ ಮುಂದೆ ಟ್ಯಾಗ್‌ಗಳು ಕಾಣುತ್ತಿಲ್ಲ.
Related Articles
Advertisement
ಈ ಕುರಿತುಪಾಲಿಕೆಯಿಂದಲೂ ಸ್ಮಾರ್ಟ್‌ಸಿಟಿ ಕಂಪನಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಬಹುತೇಕ ಕಡೆ ಪೌರ ಕಾರ್ಮಿಕರು ಟ್ಯಾಗ್ ಇಲ್ಲದಿರುವ ಕುರಿತು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿದೆ ಎನ್ನುವ ಭಾವನೆ ಅಧಿಕಾರಿಗಳಲ್ಲಿದೆ.
ಆರ್‌ಎಫ್‌ಐಡಿ ಜಾಗೃತಿ ಅಗತ್ಯ :
ಯೋಜನೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಇಲ್ಲದವಾದರೆ ಇಂತಹ ಪರಿಸ್ಥಿತಿ ಬರಲಿದೆ. ಹೀಗಾಗಿ ಆರ್‌ಎಫ್‌ಐಡಿಟ್ಯಾಗ್ ಅವಶ್ಯಕತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಮೂಡಿಸಬೇಕಿದೆ. ಕಸ ಸಂಗ್ರಹಿಸಲು ಬರುವ ಪಾಲಿಕೆಸಿಬ್ಬಂದಿ ಮನೆ ಮುಂಭಾಗದಲ್ಲಿ ಅಳವಡಿಸಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್‌ಗೆ ರೀಡರ್ ಮೂಲಕ ತಮ್ಮ ಹಾಜರಿ ಖಾತರಿಪಡಿಸುತ್ತಾರೆ. ಈ ಟ್ಯಾಗ್‌ಇರುವುದರಿಂದ ಪೌರ ಕಾರ್ಮಿಕರು ನಮ್ಮ ಪ್ರದೇಶಗಳಿಗೆ ಬಂದಿಲ್ಲ. ಒಂದು ವೇಳೆ ಬಂದರೂ ಕಸ ಸಂಗ್ರಹಿಸುತ್ತಿಲ್ಲ ಎನ್ನುವ ದೂರುಗಳಿಗೆ ಅವಕಾಶ ಇರಲ್ಲ.
0836-6612601 ಕರೆ ಮಾಡಿ ಅಳವಡಿಸಿಕೊಳ್ಳಿ :
ಕಸ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆರ್‌ಎಫ್‌ಐಡಿ ಟ್ಯಾಗ್ ಉಪಯುಕ್ತವಾಗಿದೆ. ಈ ವ್ಯವಸ್ಥೆ ಪಾಲಿಕೆ ಸಿಬ್ಬಂದಿಯಲ್ಲಿ ಕರ್ತವ್ಯ ಶಿಸ್ತು ಮೂಡಿಸಿದೆ. ನೇರವಾಗಿ ಸ್ವತ್ಛತೆಗೆ ಆದ್ಯತೆ ನೀಡಿದಂತಾಗಲಿದೆ. ಹೀಗಾಗಿ ತಮ್ಮ ಮನೆಗೆ ಅಳವಡಿಸಿರುವ ಟ್ಯಾಗ್ ಕಿತ್ತು ಹೋಗಿದ್ದರೆ ಕೂಡಲೇ ಸ್ಮಾರ್ಟ್ ಸಿಟಿ ಕಂಪನಿಯ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದರೆ ಪುನಃ ಅಳವಡಿಸುವ ಕೆಲಸ ಆಗಲಿದೆ. ಸ್ಮಾರ್ಟ್ ಸಿಟಿ ಕಂಪನಿಯ ದೂ: 0836-6612601 ಕರೆ ಮಾಡಿದರೆ ಟ್ಯಾಗ್ ಅಳವಡಿಸುವ ಕಾರ್ಯ ಆಗಲಿದೆ.
ಅಳವಡಿಸಿದ್ದ ಟ್ಯಾಗ್ ಕೆಲವೆಡೆ ಕಿತ್ತು ಹೋಗಿವೆ ಎನ್ನುವ ವಿಷಯ ಗೊತ್ತಾಗಿದೆ.ಅಂತಹ ಮನೆಗಳನ್ನು ಗುರುತಿಸಿ ಪುನಃಅಳವಡಿಸುವ ಕೆಲಸ ಆಗಲಿದೆ. ಸಾರ್ವಜನಿಕರು ತಮ್ಮ ಮನೆ ಮುಂದೆ ಟ್ಯಾಗ್ ಇಲ್ಲದಿದ್ದರೆ ಸ್ಮಾರ್ಟ್ಸಿಟಿ ಕಂಪನಿಯ ದೂರವಾಣಿಗೆ ಕರೆ ಮಾಡಿತಿಳಿಸಿದರೆ ಟ್ಯಾಗ್ ಕೂಡಿಸುವ ಕೆಲಸ ಆಗಲಿದೆ.ಟ್ಯಾಗ್ ಅತ್ಯಂತ ಉಪಯುಕ್ತವಾಗಿದ್ದು,ಜೋಪಾನವಾಗಿ ಕಾಪಾಡಿಕೊಳ್ಳಬೇಕು. – ಶಕೀಲ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಸ್ಮಾರ್ಟ್ ಸಿಟಿ ಕಂಪನಿ.
-ಹೇಮರಡ್ಡಿ ಸೈದಾಪುರ