Advertisement

ವಂಚಕರ ಆಸ್ತಿ ಜಪ್ತಿ ಮಸೂದೆ ಜಾರಿ ಕ್ರಾಂತಿಕಾರಿ ಹೆಜ್ಜೆ:  ಸಿ.ಟಿ. ರವಿ

06:25 AM Mar 03, 2018 | Team Udayavani |

ಚಿಕ್ಕಮಗಳೂರು: ಕೇಂದ್ರ ಸರಕಾರ ವಂಚಕರ ಆಸ್ತಿ ಜಪ್ತಿ ಮಸೂದೆ ತರಲು ಮುಂದಾಗಿರುವುದು ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಬಣ್ಣಿಸಿದರು. 

Advertisement

ಕಾಂಗ್ರೆಸ್‌ ಪಕ್ಷ ದೇಶ ಆಳುತ್ತಿದ್ದಾಗ ಲೂಟಿ ಮಾಡಿದವರು ನೆಮ್ಮದಿಯಾಗಿದ್ದರು. ಈಗ ದೇಶ ಬಿಟ್ಟು ಓಡಿದ್ದಾರೆ. ಕ್ರಾಂತಿಕಾರಿ ಮಸೂದೆ ತರುವ ಮೂಲಕ ಲೂಟಿ ಮಾಡಿದರೆ ತಪ್ಪಿಸಿಕೊಂಡು ಹೋಗುವುದು ಸುಲಭವಲ್ಲ ಎಂಬ ಸಂದೇಶವನ್ನು ನೀಡಲು ಪ್ರಧಾನಿ ಮುಂದಾಗಿದ್ದಾರೆ ಎಂದರು. ಈ ದೇಶಕ್ಕೆ ಮೋಸ ಮಾಡಿದವರು ಕಾಂಗ್ರೆಸ್‌ ಕೃಪಾಶೀರ್ವಾದದ ನೆರಳಿನಲ್ಲಿ ನೆಮ್ಮದಿಯಾಗಿ ಇರುತ್ತಿದ್ದ ಕಾಲ ಮುಗಿದಿದೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next