Advertisement
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಪ್ರಬುದ್ಧರ ಗೋಷ್ಠಿ ಉದ್ಘಾಟಿಸಿ ತದನಂತರ ರೈತರ-ಉದ್ಯಮಿಗಳ ಹಾಗೂ ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆಯುಷ್ಮಾನ ಭಾರತ ಆರೋಗ್ಯ ಯೋಜನೆಯಡಿ ನೂರಕ್ಕೆ ನೂರಷ್ಟು ಕೇಂದ್ರ ಸರ್ಕಾರವೇ ವೆಚ್ಚ ಭರಿಸುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರ ಇದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕಾಗಿದೆ.
Related Articles
Advertisement
ಬೀದರಗೆ 150 ಕೋಟಿ ರೂ. ಬೆಳೆವಿಮೆ ಮಂಜೂರು: ಸಂಸದ ಭಗವಂತ ಖೂಬಾ ಮಾತನಾಡಿ, ಬೆಳೆವಿಮೆ ಯೋಜನೆ ಚೆನ್ನಾಗಿದೆ. ಮೋದಿ ಸರ್ಕಾರ ಬಂದ ಬಳಿಕ ರೈತರ ಪ್ರಿಮಿಯಂ ಶೇ. 14 ಪ್ರತಿಶತ ಇದ್ದಿರುವುದನ್ನು ಮುಂಗಾರಿ ಬೆಳೆಗೆ ಶೇ. 2 ಹಾಗೂ ಹಿಂಗಾರಿ ಬೆಳೆಗೆ 1.5ರಷ್ಟು ಮಾತ್ರಪ್ರಿಮಿಯಂ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷದ ಹಿಂದೆ ಬೀದರ ಜಿಲ್ಲೆಗೆ 120 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಇದಕ್ಕೆ ಬೆಳೆಹಾನಿ ವರದಿ ಪರಿಣಾಮಕಾರಿ ಮಾಡಿರುವುದೇ ಕಾರಣವಾಗಿದೆ. ಈಗ 2018-19ನೇ ಸಾಲಿನ ಮುಂಗಾರು ಹಂಗಾಮು ತೊಗರಿ ಹಾನಿಗೆ ಬೀದರ ಜಿಲ್ಲೆಗೆ 150 ಕೋಟಿ ರೂ. ಬೆಳೆವಿಮೆ ಮಂಜೂರಾಗಲಿದೆ. ಕೆಲವೇ ದಿನಗಳಲ್ಲಿ ಮಂಜೂರಾತಿ ಆದೇಶ ಹೊರ ಬೀಳಲಿದೆ ಎಂದು ಹೇಳಿದರು. ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಮುಖಂಡರಾದ ಎಸ್.ಎಸ್. ಪಾಟೀಲ ಕಡಗಂಚಿ, ರಾಜೇಂದ್ರ ಕರೆಕಲ್, ಚನ್ನಾರೆಡ್ಡಿ ಗೋಸಬಾಳ, ಚಂದ್ರಶೇಖರ ತಳ್ಳಳ್ಳಿ, ಶ್ರೀಮಂತ ಉದನೂರ, ಸಚಿನ್ ಶಹಾ ಮುಂತಾದವರು ಪ್ರಶ್ನೆ ಕೇಳಿದರು. ಶಾಸಕ ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಶಾಸಕ ಶಶೀಲ ನಮೋಶಿ ಇದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ಚಂದು ಪಾಟೀಲ ಸ್ವಾಗತಿಸಿ, ಸಚಿವರ ಪರಿಚಯ ಮಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಸ್ವಾಗತಿಸಿದರು. ಸಿದ್ಧಾಜಿ ಪಾಟೀಲ ನಿರೂಪಿಸಿದರು. ನಿಯಮ ಪಾಲಿಸದೆ ರೈಲ್ವೆ ವಿಭಾಗ ಘೋಷಣೆ ಪ್ರಬುದ್ಧ ಗೋಷ್ಠಿಯಲ್ಲಿ ಮಾತನಾಡಿದ ಬೀದರ ಸಂಸದ ಭಗವಂತ ಖೂಬಾ, 2014ರ ಮಾರ್ಚ್‌ನಲ್ಲಿ ಆಗ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ 5 ಪೈಸೆ ಇಡದೇ ಬಹು ಮುಖ್ಯವಾಗಿ ಯಾವುದೇ ನಿಯಮಾವಳಿ ಪಾಲನೆ ಮಾಡದೇ ಘೋಷಣೆ ಮಾಡಿದ್ದಾರೆ. ಅಂದರೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ದೃಷ್ಟಿಯಿಂದ ರೈಲ್ವೆ ವಿಭಾಗೀಯ ಕಚೇರಿ ಬಗ್ಗೆ ಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ರೈಲ್ವೆ ವಿಭಾಗೀಯ ಕಚೇರಿ ಕ್ರಮಬದ್ಧವಾಗಿ ಇಲಾಖೆ ನಿಯಮದಡಿ ಘೋಷಣೆ ಮಾಡಿಲ್ಲ, ಹೀಗಾಗಿ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಇಲ್ಲ. ಅದೇ ರೀತಿ ಇಎಸ್‌ಐಸಿ ಆಸ್ಪತ್ರೆ ಪೂರ್ಣಗೊಳ್ಳದಿದ್ದರೂ ತಮ್ಮ ಪಕ್ಷದ ನಾಯಕಿಯನ್ನು ಕರೆಯಿಸಿ ಗಡಿಬಿಡಿಯಲ್ಲಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ತುಮಕೂರು ಹಾಗೂ ಕಲಬುರಗಿಯಲ್ಲಿ ವಿಶೇಷ ಆರ್ಥಿಕ ವಲಯ (ನಿಮ್l) ಸ್ಥಾಪನೆಗೆ ಹಿಂದಿನ ಯುಪಿಎ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಆದರೆ ತುಮಕೂರಿನಲ್ಲಿ ವಲಯ ಸ್ಥಾಪನೆಯಾಯಿತು. ಆದರೆ ಕಲಬುರಗಿಯಲ್ಲಿ ಆಗಲಿಲ್ಲ. ಏಕೆಂದರೆ ಇಲ್ಲಿ ಅಗತ್ಯ ಭೂಮಿ ಕೊಡಲಿಲ್ಲ. ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಯಾರು ಎಂದು ಬೊಟ್ಟು ಮಾಡುವ ಅವಶ್ಯಕತೆ ಇಲ್ಲ. ಏನಿಸುತ್ತದೆ. ಅದೇ ರೀತಿ ಕಲಬುರಗಿ ವಿಮಾನ ನಿಲ್ದಾಣಕ್ಕೆ 2008ರಲ್ಲಿಯೇ ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಅಡಿಗಲ್ಲು ಹಾಕಿದರು. ಮರುವರ್ಷ ಖರ್ಗೆ ಅವರು ಕೇಂದ್ರದಲ್ಲಿ ಸಚಿವರಾದವರು. ತದನಂತರ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ ವಿಮಾನ ನಿಲ್ದಾಣ ಕಾಮಗಾರಿ ವೇಗ ಹೆಚ್ಚಾಗಲಿಲ್ಲ. ಈಗಷ್ಟೇ ವಿಮಾನ ಹಾರಾಟ ಅನುಮತಿಗಾಗಿ ರಾಜ್ಯ ಸರ್ಕಾರ ಪತ್ರ ಬರೆದಿದೆ. ಎರಡು ವರ್ಷಗಳ ಹಿಂದೆಯೇ ಪತ್ರ ಬರೆಯಬೇಕಿತ್ತು. ಒಟ್ಟಾರೆ ಲೋಕಸಭಾ ಚುನಾವಣೆ ನಂತರ ವಿಮಾನ ಹಾರಾಟ ಶುರುವಾಗುತ್ತೇ ಎಂದು ಖೂಬಾ ಹೇಳಿದರು.