Advertisement
ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗದ ಭಯ: ಕಲ್ಯಾಣಿ ದಶಕಗಳಿಂದ ಬಳಕೆಯಾಗದೆ ಹೂಳು ತುಂಬಿ, ಗಿಡಗಂಟಿ, ಪೊದೆಗಳು ಬೆಳೆದಿದ್ದವು. ಅಲ್ಲದೆ ಕಲ್ಯಾಣಿಯಲ್ಲಿದ್ದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭಯ ಮೂಡಿತ್ತು. ಅಲ್ಲದೆ ವಿಷಕಾರಿ ಹಾವುಗಳ ಆವಾಸ ಸ್ಥಾನವಾಗಿದ್ದರಿಂದ ಜನರಲ್ಲಿ ಸಂಚರಿಸಲು ನಿವಾಸಿಗಳಿಗೆ ಭಯವಾಗುತ್ತಿತ್ತು. ಹೀಗಾಗಿ ಅಲ್ಲಿನ ನಿವಾಸಿಗಳು ಮತ್ತು ಪರಿಸರಾಸಕ್ತರು ಸೇರಿ ಕಲ್ಯಾಣಿಯನ್ನು ಶ್ರಮದಾನದಿಂದ ಸ್ವಚ್ಛಗೊಳಿಸಿದರು.
Related Articles
Advertisement
ಒಂದು ಸಾವಿರ ಅಡಿಗಳಷ್ಟು ಆಳದವರೆಗೆ ಕೊಳವೆ ಬಾವಿ ಕೊರೆದರೂ ಸಹ ನೀರು ದೊರೆಯುವುದೇ ಕಷ್ಟ. ಆದರೆ ಇಲ್ಲಿನ ಕಲ್ಯಾಣಿಯಲ್ಲಿ ಸುಮಾರು 20 ಅಡಿಗಳ ಆಳದಲ್ಲಿಯೇ ನೀರು ಕಾಣಿಸುತ್ತಿವೆ. ಇಂತಹ ಮಹತ್ವದ ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆಗಾರಿಕೆ ನಗರಸಭೆ ಪೌರಕಾರ್ಮಿಕರದಷ್ಟೇ ಅಲ್ಲ. ಸ್ಥಳೀಯ ನಿವಾಸಿಗಳ ಪಾತ್ರ ದೊಡ್ಡದು ಎಂದರು.
ಸ್ಥಳೀಯ ಸಹಕಾರ ಮುಖ್ಯ: ಕಲ್ಯಾಣಿಯಲ್ಲಿನ ಪುರಾತನ ಕಲ್ಲುಕಟ್ಟಡ ಶಿಥಿಲಗೊಂಡು ಹಾಳಾಗಿದೆ. ಆದರೆ ಕಲ್ಲುಗಳು ಇದ್ದು, ಹಿಂದಿನ ಸ್ಥಿತಿಯಲ್ಲೇ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರ ಸಹಕಾರ ಅಗತ್ಯವಿದೆ. ಜಿಲ್ಲೆಯಲ್ಲಿ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಯಂತೆ ಕಲ್ಯಾಣಿ ಅಭಿವೃದ್ಧಿಗೆ ಸ್ಥಳೀಯ ನಿವಾಸಿಗಳು ದೇಣಿಗೆ ನೀಡಿದರೆ ಮಾತ್ರ ಶೀಘ್ರವಾಗಿ ಅಭಿವೃದ್ಧಿ ಕೆಲಸ ನಡೆಯಲಿದೆ. ಸರ್ಕಾರದ ವತಿಯಿಂದಲೇ ಕೆಲಸ ಆಗಲಿ ಎಂದು ಕಾಯುತ್ತ ಕುಳಿತರೆ ಮತ್ತೆ ಕಲ್ಯಾಣಿ ಹೂಳಿನಿಂದ ತುಂಬಿಕೊಳ್ಳಲಿದೆ. 15 ದಿನಗಳಿಗೆ ಒಮ್ಮೆ ಒಂದು ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
2.10 ಲಕ್ಷ ರೂ. ದೇಣಿಗೆ ಸಂಗ್ರಹ: ಕಲ್ಯಾಣಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಕರೀಗೌಡ ಅವರು ವೈಯಕ್ತಿಕವಾಗಿ 10,000 ರೂ.ದೇಣಿಗೆ ನೀಡಿದರು. ಜಿಲ್ಲಾಧಿಕಾರಿ ಸೇವಮನೋಭಾವ ಮೆಚ್ಚಿದ ಸಭೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಶಕ್ತಿಯನುಸಾರ ದೇಣಿಗೆ ನೀಡಿದರು. ಕೊನೆಯಲ್ಲಿ ಒಟ್ಟು 2.10 ಲಕ್ಷ ರೂ. ದೇಣಿಗೆ ಸಂಗ್ರಹವಾಯಿತು.
ಸ್ಥಳೀಯರಿಂದ ಸಂಗ್ರಹವಾದ ದೇಣಿಗೆ ಹಣವನ್ನು ನಗರಸಭೆ ಪೌರಾಯುಕ್ತರಿಗೆ ಹಸ್ತಾತಂತರಿಸಿ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ತಿಳಿಸಲಾಯಿತು. ಅಲ್ಲದೆ ನಗರಸಭೆ ಪೌರಾಯುಕ್ತ ಆರ್. ಮಂಜುನಾಥ್, ಕಲ್ಯಾಣಿ ಅಭಿವೃದ್ಧಿಗೆ ನಗರಸಭೆಯಿಂದ 5 ಲಕ್ಷ ರೂ.ಗಳ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಸದ್ಯದಲ್ಲೇ ನಗರಸಭೆಯಿಂದ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ರೋಜಿಪುರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಕರುನಾಡ ಸೇನೆ, ರಾಜ್ಯ ರೈತ ಸಂಘದ ಕಾರ್ಯಕರ್ತರು, ವಕೀಲರು ಹಾಗೂ ನಗರಸಭೆ ಪೌರ ಕಾರ್ಮಿಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.