Advertisement
ನ.4 ರಂದು ಪ್ರಕಟಿಸಿದ್ದ ಪಟ್ಟಿಯ 8 ವಾರ್ಡ್‌ಗಳ ಮೀಸಲು ಬದಲಾಯಿಸಿ ಆದೇಶ ಹೊರಡಿಸಿದೆ. ಕಳೆದ ಬಾರಿ ಮತ್ತು ಈ ಬಾರಿ ಪಟ್ಟಿಯಲ್ಲಿ 8 ವಾಡ್ ìಗಳ “ಸಾಮಾನ್ಯ’ ಮತ್ತು “ಸಾಮಾನ್ಯ ಮಹಿಳೆ’ ಯಾಗಿ ಅದಲು ಬದಲಾಗಿವೆ. ಗದಗ-ಬೆಟಗೇರಿ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯ ಹೈಕೋರ್ಟ್, ಡಿಸೆಂಬರ್ ಒಳಗಾಗಿ ಚುನಾವಣೆ ಪೂರ್ಣಗೊಳಿಸುವಂತೆ ಸೂಚಿಸಿತ್ತು.
Related Articles
ಪರಿಷ್ಕೃತ ಮೀಸಲಾತಿ ಪಟ್ಟಿಯಲ್ಲಿ ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಪೈಕಿ 8 ವಾರ್ಡ್ ಮೀಸಲು ಬದಲಾಗಿದೆ. ಕಳೆದ ಸೆಪ್ಟೆಂಬರ್ 4 ರಂದು ಹೊರಡಿಸಿದ ಪಟ್ಟಿಯಲ್ಲಿ ಸಾಮಾನ್ಯ ವಾರ್ಡ್‌ಗಳಾಗಿದ್ದ 12, 17, 27 ನೇ ವಾರ್ಡ್‌ಗಳು ಈಗ ಸಾಮಾನ್ಯ ಮಹಿಳೆಯಾಗಿವೆ. ಅದರಂತೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ 14, 19, 25 ನೇ ವಾರ್ಡ್‌ಗಳು ಪರಿಷ್ಕೃತ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಾರ್ಪಡಿಸಲಾಗಿದೆ.
Advertisement
ಹಿಂದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ 5ನೇ ವಾರ್ಡ್ ಈಗ ಹಿಂದುಳಿದ ವರ್ಗ ಎ(ಮಹಿಳೆ) ಮತ್ತು ಈ ಹಿಂದೆ ಹಿಂದುಳಿದ ವರ್ಗ ಎ(ಮಹಿಳೆ)ಗೆ ಮೀಸಲಾಗಿದ್ದ15ನೇ ವಾರ್ಡ್ ಈಗ ಸಾಮಾನ್ಯ ವಾರ್ಡ್ ಆಗಿ ಬದಲಾಯಿಸಲಾಗಿದೆ. ಇನ್ನುಳಿದ ಎಲ್ಲ ವಾರ್ಡ್ ಮತ್ತು ವರ್ಗಗಳ ಮೀಸಲಾತಿಯನ್ನು ಯಥಾವತ್ತಾಗಿ ಮುಂದುವರಿಸಲಾಗಿದೆ.