Advertisement
ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಪೇಟೆಯ ಮೋಹಕ ಬಲೆಯೊಳಗೆ ಸಿಲುಕಿ ತಮ್ಮ ಮೂಲ ನೆಲೆ, ಅಲ್ಲಿನ ಪರಿಸರ, ಬಂಧು ಬಾಂಧವ್ಯದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಆಧುನಿಕ ಬದುಕಿನ ದಾಸರಾಗಿರುವವರು ಡಾ| ಶಿವರಾಮ ಕಾರಂತರ “ಚಿಗುರಿದ ಕನಸು’ ಕಾದಂಬರಿಯನ್ನು ಓದಿದರೆ ಅದ್ಭುತ ಬದಲಾವಣೆ ಸಾಧ್ಯ.
Related Articles
Advertisement
ಈ ಕೃತಿಯ ಬರವಣಿಗೆ ಶೈಲಿ ಓದುಗನನ್ನು ಹಿಡಿದಿಡುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗುವಾಗ ಧಾರಾಕಾರ ಮಳೆಯ ಮಧ್ಯೆ ನಿಂತಿದ್ದೇವೆ, ಗದ್ದೆಯನ್ನು ಉಳುತ್ತಿದ್ದೇವೆ, ಘಟ್ಟದ ತುದಿಯಲ್ಲಿ ನಿಂತು ಮಾತನಾಡು ತ್ತಿದ್ದೇವೆ ಇತ್ಯಾದಿ ಭಾವನೆ ಓದುಗನಲ್ಲಿ ಮೂಡುತ್ತದೆ.
ಕಾರಂತರು ಬಳಸಿದ ಭಾಷಾ ಶೈಲಿ, ಕಾದಂಬರಿಯಲ್ಲಿ ಬರುವ ತಿರುವುಗಳು, ಪ್ರೇಮ ವಿರಹದ ಕ್ಷಣ, ತಂದೆ ಮಗನ ಸಂಬಂಧ ಎಲ್ಲವೂ ಅದ್ಭುತ ವಾಗಿವೆ. 2003ರಲ್ಲಿ ಈ ಕಾದಂಬರಿಯು ಶಿವರಾಜ ಕುಮಾರ್ ನಟನೆ ಯಲ್ಲಿ ಟಿ.ಎಸ್. ನಾಗಾ ಭರಣ ನಿರ್ದೇಶನದಲ್ಲಿ ಸಿನೆಮಾ ಆಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳನ್ನು ಕೂಡ ಗೆದ್ದಿತ್ತು.
ಕೊರೊನಾ ಸಂದರ್ಭದಲ್ಲಿ ಒಂದು ದೊಡ್ಡ ವರ್ಗ ಕೃಷಿಯತ್ತ ವಾಲಿದ್ದು, ಅಂಥವರು ಈ ಕೃತಿಯನ್ನು ಓದಿದರೆ ಒಳಿತು. ಪೇಟೆಯ ಖುಷಿ ಕ್ಷಣಿಕವಾದುದು ಮತ್ತು ಹಳ್ಳಿಯ ಬಹುಶ್ರೀಮಂತಿಕೆಯು ನಮಗೆ ಎಲ್ಲ ರೀತಿಯಲ್ಲೂ ಸಂತೋಷವನ್ನು ಕೊಡುತ್ತದೆೆ. ಜತೆಗೆ ಕೃಷಿಯ ಮಹತ್ವದ ಬಗ್ಗೆಯೂ, ಪರಿಸರದ ಬಗ್ಗೆಯೂ ಈ ಕೃತಿಯು ನಮಗೆ ಸಾಕಷ್ಟು ಮಾಹಿತಿ ನೀಡುತ್ತದೆ.
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪೂರ್ವಜರ ನೆಲೆಯನ್ನು ದೂರ ಮಾಡಿ, ಕೃಷಿಯನ್ನು ಮರೆತರೆ ಏನೇನು ಸಂಕಷ್ಟಗಳು ಎದುರಾಗಲಿವೆ ಎಂಬ ಬಗ್ಗೆಯೂ ಕೃತಿ ನಮ್ಮ ಕಣ್ಣು ತೆರೆಸುತ್ತದೆ. ಕೃತಿಯು ಹಳ್ಳಿ ಮತ್ತು ಪೇಟೆವಾಸದ ನಡುವಿನ ವ್ಯತ್ಯಾಸ, ಪ್ರಕೃತಿಯ ಮಡಿಲಿನ ಖುಷಿಯನ್ನು ಸುಂದರ ಶಬ್ದಗಳಲ್ಲಿ ನಮಗೆ ಕಟ್ಟಿ ಕೊಡುವಲ್ಲಿ ಸಫಲವಾಗಿದೆ. ಮಳೆಯ ಜತೆ ನಮ್ಮನ್ನು ಓದಿಸುತ್ತಾ ಹೋಗುವ ಈ ಕಾದಂಬರಿ ಚೆನ್ನಾಗಿದೆ.
ಬಸನಗೌಡ ಪಾಟೀಲ್, ಯರಗುಪ್ಪಿ