Advertisement
ಕೇಂದ್ರದ ಎನ್.ಡಿ.ಆರ್.ಎಫ್. ತಂಡದ ಭರ್ತೇಂದು ಕುಮಾರ್ ಸಿಂಗ್, ಮಾಣಿಕ್ ಚಂದ್ರ ಪಂಡಿತ್, ಸದಾನಂದ ಬಾಬು ಅವರ ತಂಡ ಅಡಿಕೆ, ಕಾಳುಮೆಣಸು ಕೊಳೆರೋಗದಿಂದ ಕಂಗೆಟ್ಟ ರೈತರ ಮನೆಗೆ ಭೇಟಿ ನೀಡಿತು. ಮೂರ್ಜೆಬೆಟ್ಟು ಅಣ್ಣಪ್ಪ ರೈ 3.36 ಎಕ್ರೆ, ರಮಾನಾಥ ಅಡಪ 2.53 ಎಕ್ರೆ, ವಿಶ್ವನಾಥ ಅಡಪ 2.1 ಎಕ್ರೆ, ಶ್ರೀಪ್ರಕಾಶ ಕುಕ್ಕಿಲ 6.1 ಎಕ್ರೆ, ಗೋಪಾಲಕೃಷ್ಣ ಶೆಟ್ಟಿ ಬಿಕನಾಜೆ 1.5 ಎಕ್ರೆ, ಸುಧೇಶ್ ಭಂಡಾರಿ ಎರ್ಮೆನಿಲೆ 2.23 ಎಕ್ರೆ ಸಹಿತ ಹಲವು ಮಂದಿ ರೈತರು ತಮ್ಮ ಶೇ.8 0ರಷ್ಟು ಬೆಳೆ ನಷ್ಟ ಹೊಂದಿದ ಬಗ್ಗೆ ವಿವರಿಸಿದರು.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಸೆ. 14ಕ್ಕೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯಲಿದ್ದು, ಈ ಸಂದರ್ಭ ಬೇರೆ ಬೇರೆ ಕಡೆ ಭೇಟಿ ನೀಡಿ, ಸಂಗ್ರಹಿಸಿದ ವರದಿಯನ್ನು ಈ ತಂಡ ಸಲ್ಲಿಸಲಿದೆ. ಆ ಸಭೆಯಲ್ಲಿ ಆಗುವ ನಿರ್ಣಯದ ಪ್ರಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಪರಿಹಾರದ ಕುರಿತ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದು, ಸೆ. 15ರವರೆಗೆ ಅರ್ಜಿ ನೀಡಲು ಅವಕಾಶವಿದೆ ಎಂದರು.