Advertisement

ಡಾ|ಟಿಎಂಎ ಪೈ 121ನೆಯ ಜನ್ಮದಿನಾಚರಣೆ

09:16 PM Apr 30, 2019 | Sriram |

ಉಡುಪಿ: ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ|ಟಿಎಂಎ ಪೈಯವರ 121ನೆಯ ಜನ್ಮದಿನವನ್ನು ಮಂಗಳವಾರ ಆಚರಿಸಲಾಯಿತು.

Advertisement

ಮಣಿಪಾಲ ಸಿಟಿಜನ್‌ ಫೋರಂ, ಮಣಿಪಾಲ ಮಾಹೆ ವತಿಯಿಂದ ಮಣಿಪಾಲದ ಮಾಧವ ವಿಹಾರ ಉದ್ಯಾನವನದ ಆ್ಯಂಪಿ ತಿಯೇಟರ್‌ನಲ್ಲಿ ಮಾಯಾ ಕಾಮತ್‌ ಮತ್ತು ಬಳಗದವರಿಂದ ಭಜನೆ ಕಾರ್ಯಕ್ರಮ ಜರುಗಿತು. ಡಾ| ಟಿಎಂಎ ಪೈಯವರು ವಾಸವಿದ್ದ ಸ್ಮತಿ ಭವನದಲ್ಲಿ (ಡಾ| ಟಿಎಂಎ ಪೈ ಮ್ಯೂಸಿಯಂ) ಉಡುಪಿಯ ಅಕಾಡೆಮಿ ಆಫ್ ಮ್ಯೂಸಿಕ್‌ ಆ್ಯಂಡ್‌ ಫೈನ್‌ ಆರ್ಟ್ಸ್ನ ವಿದ್ವಾನ್‌ ಮಹಾಬಲೇಶ್ವರ ಭಾಗವತ್‌ ಮತ್ತು ಬಳಗದವರಿಂದ ಸುಗಮ ಸಂಗೀತ ನಡೆಯಿತು.

ಮಾಧವ ವಿಹಾರದಲ್ಲಿ ಡಾ|ಟಿಎಂಎ ಪೈಯವರ ಪುತ್ಥಳಿಗೆ ಗೌರವ ಸಮರ್ಪಿಸಲಾಯಿತು. ಬಳಿಕ ಪಕ್ಕದಲ್ಲಿರುವ ಶಾರದಾ ಪೈ, ಟಿಎ ಪೈಯವರ ಅಂತಿಮ ಸಂಸ್ಕಾರ ನಡೆದ ಸ್ಥಳಕ್ಕೆ ಕುಟುಂಬಸ್ಥರು ಗೌರವ ಸಲ್ಲಿಸಿದರು.

ಮಣಿಪಾಲ ಮಾಹೆ ವಿ.ವಿ. ಕುಲಾಧಿಪತಿ ಡಾ|ರಾಮದಾಸ್‌ ಎಂ. ಪೈ, ಮಾಹೆ ಟ್ರಸ್ಟ್‌ ಟ್ರಸ್ಟಿ ವಸಂತಿ ಪೈ, ಎಂಇಎಂಜಿ ಅಧ್ಯಕ್ಷ ಡಾ|ರಂಜನ್‌ ಪೈ, ಡಾ|ಟಿಎಂಎ ಪೈ ಫೌಂಡೇಶನ್‌ ಕಾರ್ಯದರ್ಶಿ ಟಿ.ಅಶೋಕ್‌ ಪೈ ಮೊದಲಾದವರು ಉಪಸ್ಥಿತರಿದ್ದರು.

ಮಾಹೆ ವಿ.ವಿ. ಆಡಳಿತ ಕಚೇರಿಯಲ್ಲಿ ಪುತ್ಥಳಿಗೆ ಗೌರವಾರ್ಪಣೆ ಮಾಡಿದ ಮಂಗಳೂರು, ಮಣಿಪಾಲ ಕೆಎಂಸಿ ನಿವೃತ್ತ ಪ್ರಾಧ್ಯಾಪಕ ಡಾ|ಲಕ್ಷ್ಮಣ ಪೈ ಅವರು ಡಾ|ಟಿಎಂಎ ಪೈಯವರ ಬಗೆಗೆ ಮಾತನಾಡಿದರು. ಡಾ|ರಂಜನ್‌ ಪೈ, ವಸಂತಿ ಪೈ, ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಸಿಬಂದಿ ಉಪಸ್ಥಿತರಿದ್ದರು.

Advertisement

ಸಂಜೆ ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್‌ ಸಭಾಂಗಣದಲ್ಲಿ ಸ್ಥಾಪಕರ ದಿನಾಚರಣೆ ನಡೆಯಿತು.ಮಾಧವ ವಿಹಾರದಲ್ಲಿ ಡಾ| ರಾಮದಾಸ್‌ ಪೈ ಮತ್ತಿತರರು ಗೌರವ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next