Advertisement

ಅಲ್ಪಾವಧಿ ಬೆಳೆಯಿಂದ ಆದಾಯ ವೃದ್ಧಿ

04:53 PM Nov 02, 2020 | Suhan S |

ಸಿಂದಗಿ: ಚೆಂಡು ಹೂವು ಅಲ್ಪಾವಧಿ  ತೋಟಗಾರಿಕೆ ಬೆಳೆಯಾಗಿದ್ದು ಉತ್ತಮ ಆದಾಯ ತರುವ ಬೆಳೆಯಾಗಿದೆ. ಆದ್ದರಿಂದ ಅಲ್ಪಾವಧಿ ಬೆಳೆಗಳ ಬಗ್ಗೆ ರೈತರು ತಿಳಿದು ಬೆಳೆಯಲು ಆಸಕ್ತಿ ಹೊಂದಬೇಕು ಎಂದು ಪುಣೆಯ ರಾಷ್ಟ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ಕೇಂದ್ರದ ನಿರ್ದೇಶಕ ಅಶೋಕ ಅಲ್ಲಾಪುರ ಹೇಳಿದರು.

Advertisement

ರವಿವಾರ ತಾಲೂಕಿನ ಬಂದಾಳ ವೀರೂಪಾಕ್ಷಯ್ಯ ಮಠ ಅವರ ತೋಟದಲ್ಲಿ ಕೃಷಿ ಇಲಾಖೆ ಮತ್ತು ತಾಲೂಕಿನ ಹರನಾಳ ಗ್ರಾಮದ ಪರಮಾನಂದ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಚೆಂಡು ಹೂಕ್ಷೇತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡುಹೂವಿನ ಬೇಡಿಕೆ ಹೆಚ್ಚಿದ್ದು ಚೆಂಡು ಹೂ ಬೆಳೆದು ಉತ್ತಮ ಸಂಪಾದನೆ ಮಾಡಬಹುದು. ಚೆಂಡುಹೂವನ್ನು ವರ್ಷವಿಡಿ ಬೆಳೆಯಬಹುದಾದರೂಮೇ-ಜುಲೈ 31ರವರೆಗೆ ಬೆಳೆದ ಬೆಳೆ ಹೆಚ್ಚುಇಳುವರಿ ಕೊಡುತ್ತದೆ. ಹಬ್ಬಗಳಲ್ಲಿ ಉತ್ತಮ ದರವೂ ಸಿಗುತ್ತದೆ ಎಂದು ಹೇಳಿದರು.

ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ ಮಾತನಾಡಿ, ಚೆಂಡು ಹೂ ಕೃಷಿ ಉತ್ತಮ ಆದಾಯ ತರುವ ಅಲ್ಪಾವಧಿ ಬೆಳೆಯಾಗಿದೆ. ಸಸಿ ನಾಟಿ ಮಾಡಿದ 45 ದಿನಗಳ ನಂತರ ಹೂವು ಬಿಡಲು ಪ್ರಾರಂಭವಾಗುತ್ತವೆ. ಒಳ್ಳೆಯ ಬೆಳೆ ಬಂದರೆ ಸುಮಾರು ಎರಡುವರೆ ತಿಂಗಳುಗಳವರೆಗೆ ಹೂವನ್ನು ಕಟಾವು ಮಾಡಬಹುದು. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಹೂ ಕಟಾವು ಮಾಡಲಾಗುತ್ತದೆ. ಸರಾಸರಿ ಒಂದು ಗಿಡಕ್ಕೆ 2 ಕೆಜಿಯಂತೆ ಒಂದು ಎಕರೆಗೆ 8ರಿಂದ 10 ಟನ್‌ ಚೆಂಡು ಹೂ ಸಿಗುತ್ತದೆ. ಪ್ರತಿ ಎಕರೆಗೆ ಬೆಳೆಯುವ ಕಬ್ಬಿನ, ತೊಗರಿ ಸೇರಿದಂತೆ ಮುಂತಾದ ವಾರ್ಷಿಕ ಬೆಳೆಗಿಂತ ಚೆಂಡು ಹೂವು ಬೆಳೆ ರೈತರಿಗೆ ಉತ್ತಮ ಆದಾಯ ನೀಡುತ್ತಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿ, ಸಾವಯುವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಜೀವಸಾರ ಘಟಕ ಮಾಡಿಕೊಡಲಾಗುವುದು. ಸಾವಯವ ಕೃಷಿಗೆ ಅನುಕೂಲವಾಗುವ ಘಟಕದ ಸಹಾಯವನ್ನು ಇಲಾಖೆಯಿಂದ ಒದಗಿಸಿಕೊಡಲಾಗುವುದು. ನಮ್ಮ ಭಾಗದಲ್ಲಿ ಎರಡು 130 ಎಕರೆ ಪ್ರದೇಶದಲ್ಲಿಚೆಂಡು ಹೂ ಒಪ್ಪಂದ ಕೃಷಿಯಲ್ಲಿ ಬೆಳೆಯಲಾಗಿದೆ. ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದ ಸತತ ಮಂಜಿನಿಂದ ಬೆಳೆದ ಹೂಗಳಲ್ಲಿ ಕಪ್ಪು ಬಣ್ಣ ಮೂಡಿ ಇಳುವರಿ ಕುಂಠಿತವಾಗಿದೆ. ಆದ್ದರಿಂದ ಚೆಂಡು ಹೂ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿದಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

Advertisement

ವಿಜಯಪುರ ಆಗ್ರೋ ಫೇಡರೇಷನ್‌ ನಿರ್ದೇಶಕಿ ಶೈಲಜಾ ಸ್ಥಾವರಮಠ ಮಾತನಾಡಿ, ಜಮೀನಿನಲ್ಲಿ ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಯೋಜನೆಯಲ್ಲಿ ಜೀವಸಾರ ಘಟಕ ಮಾಡಿಕೊಂಡಿದ್ದೇನೆ. ಜಮೀನಿನಲ್ಲಿ ಬಾಳೆ, ಚೆಂಡು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಪುಣೆಯ ರಾಷ್ಟ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ಕೇಂದ್ರದನಿರ್ದೇಶಕ ಅಶೋಕ ಅಲ್ಲಾಪುರ ಮತ್ತು ಕೆಡಿಪಿನೂತನ ಸದಸ್ಯ ಶಿವುಕುಮಾರ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ರೈತರಾದ ಸಂಜೀವ ಮಠ, ಸಿದ್ದಲಿಂಗ ನಾಯ್ಕೋಡಿ, ವೀರೂಪಾಕ್ಷಯ್ಯ ಮಠ, ವೀರಭದ್ರಯ್ಯ ಹಿರೇಮಠ, ಗೋಲ್ಲಾಳಪ್ಪ ಮುರಗಾನೂರ, ಮಂಜುನಾಥ ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next