Advertisement
ಶುಕ್ರವಾರ ವಿಕಾಸಸೌಧದಲ್ಲಿ ಇಲಾಖೆಯ ಪ್ರಗತಿ ಪರಿಶೀಲನ ಸಭೆ ನಡೆಸಿದ ಅನಂತರ ಮಾತನಾಡಿದ ಅವರು, ರಾಜ್ಯಾದ್ಯಂತ 160 ಬಗರ್‌ಹುಕುಂ ಸಮಿತಿ ರಚನೆಯಾಗಿದ್ದು, ಈ ಸಮಿತಿಗಳ ಮುಂದೆ ನಮೂನೆ 57ರ ಅಡಿ ಸುಮಾರು 9.80 ಲಕ್ಷ ಅರ್ಜಿಗಳು ಬಂದಿವೆ. ಇವುಗಳ ಪೈಕಿ ಅನರ್ಹ ಅರ್ಜಿಗಳೇ ಹೆಚ್ಚಿವೆ. ಹೀಗಾಗಿ ಮುಂದಿನ 8 ತಿಂಗಳಲ್ಲಿ ಇವುಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಗೌಡ, ಸಮಸ್ಯೆಯ ಗಾತ್ರವನ್ನೇ ಅರಿಯದೆ, ಪರಿಹಾರ ಸೂಚಿಸಲಾಗದು. ಹೀಗಾಗಿ ಅಭಿಯಾನದ ಮಾದರಿಯಲ್ಲಿ ದರಖಾಸ್ತು ಪೋಡಿ ಪ್ರಕರಣಗಳನ್ನು ಅನುಷ್ಠಾನ
ಗೊಳಿಸಲು ತೀರ್ಮಾನಿಸಿದೆ. ಗ್ರಾಮ ಲೆಕ್ಕಿಗರ ಬಳಿ 69,437 ಸರ್ವೇ ನಂಬರ್‌ಗಳಲ್ಲಿ 1-5 ಪ್ರಕ್ರಿಯೆ ಆರಂಭಿಸಿದ್ದೇವೆ. ಪೋಡಿ ಅರ್ಹತಾ ಕಡತ ತಯಾ
ರಾದರೆ, ಸರ್ವೇ ಇಲಾಖೆಯು 6-10 ಪ್ರಕ್ರಿಯೆಯನ್ನು ನಡೆಸಲು ಅನುಕೂಲ ಆಗಲಿದೆ ಎಂದರು. ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ಭರವಸೆ
ಕ್ಷೇತ್ರಕಾರ್ಯದಲ್ಲಿ ತೊಡಗಿರುವ ಗ್ರಾಮ ಲೆಕ್ಕಿಗ(ವಿಎ)ರು ಪ್ರತಿಯೊಂದನ್ನು ಜಿಪಿಎಸ್ ಅನೇಬಲ್ಡ್ ಆ್ಯಪ್ ಮೂಲಕವೇ ಮಾಡಬೇಕಿರುವುದರಿಂದ ಫೀಲ್ಡ್‌ಗೆ ಹೋಗಲೇಬೇಕಿದೆ. ಇದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ರಜೆ ದಿನಗಳಲ್ಲೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಳ್ಳದೇ ಇರಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಕ್ಷೇತ್ರಕಾರ್ಯದಲ್ಲಿರುವ 7 ಸಾವಿರ ಗ್ರಾಮಲೆಕ್ಕಿಗರ ಪೈಕಿ ಶೇ. 50ರಷ್ಟು ವಿಎಗಳಿಗೆ ಲ್ಯಾಪ್‌ಟಾಪ್ ಕೊಡಲು ಚಿಂತನೆ ನಡೆಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
Related Articles
ಕಂದಾಯ, ವಿಪತ್ತು ನಿರ್ವಹಣೆ, ಭೂದಾಖಲೆ, ಭೂಸರ್ವೇಕ್ಷಣ ಇಲಾಖೆಗಳಲ್ಲಿ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು, ಅಭಿಯಾನಗಳನ್ನು ಅನುಷ್ಠಾನಗೊಳಿಸುವಲ್ಲಿ ಉತ್ಸಾಹ ತೋರಿ, ನಿರೀಕ್ಷೆ ಮೀರಿ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ಕೊಡಲು ನಿರ್ಧರಿಸಿದ್ದು, ಶುಕ್ರವಾರ ಚಿತ್ರದುರ್ಗ, ಹಾಸನ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿ ಸೇರಿದಂತೆ 11 ಎಸಿ, 21 ತಹಶೀಲ್ದಾರ್, 36 ಗ್ರಾಮ ಲೆಕ್ಕಿಗರು, 9 ಮಂದಿ ವಿಪತ್ತು ನಿರ್ವಹಣ ಅಧಿಕಾರಿಗಳು, ಭೂಮಾಪನ ಇಲಾಖೆಯ 83 ಅಧಿಕಾರಿಗಳಿಗೆ ಪ್ರಶಂಸಾ ಪತ್ರ ಕೊಡಲಾಯಿತು.
Advertisement